ಗಂಗಾವತಿ : ದೇಶದ ಬಹುತೇಕ ಪ್ರಾರ್ಥನಾ ಮಂದಿರ ಗಳನ್ನು ಆಯಾ ಸಮುದಾಯಕ್ಕೆ ಬಿಟ್ಟು ಕೊಡಲಾಗಿದೆ. ಆದರೆ ಹಿಂದೂ ದೇವಾಲಯಗಳ ಆಡಳಿತ ಮಾತ್ರ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರ ನಿಯಂತ್ರಿಸುತ್ತಿದೆ. ಇದು ಸರಿಯಲ್ಲ. ದೇವಾಲಯಗಳ ಆಡಳಿತ ಹಿಂದೂಗಳಿಗೆ ನೀಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದರು. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಯಾ ಧರ್ಮದ ವ್ಯಾಪ್ತಿಗೆ ಆಯಾ ದೇಗುಲಗಳ ಆಡಳಿತ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ಇದೆ. ಆದರೆ, ಸರ್ಕಾರಗಳು ಎಲ್ಲಿಯೂ ಈ ಆದೇಶವನ್ನು ಜಾರಿಗೆ ತರುತ್ತಿಲ್ಲ ಈ ಕಾರ್ಯ ತಕ್ಷಣದಿಂದ ಆಗಬೇಕು ಎಂದರು.