Home » 3. ಸಾಂಖ್ಯಯೋಗ
 

3. ಸಾಂಖ್ಯಯೋಗ

by Kundapur Xpress
Spread the love
  1. ಸಾಂಖ್ಯಯೋಗ

ನಾನು, ನನ್ನದು, ನನಗೆ, ನನ್ನವರು ಎಂಬಿತ್ಯಾದಿ ಭಾವಗಳು ಹುಟ್ಟಿನಿಂದ ಬಂದದ್ದಲ್ಲವೇ? ಅದನ್ನು ನಿರ್ಮೂಲನಗೊಳಿಸುವುದಾದರೂ ಹೇಗೆ ಸಾಧ್ಯ? ಹುಟ್ಟುಗುಣ ಘಟ್ಟ ಹತ್ತಿದರೂ ಬಿಡದು ಎಂದು ಹೇಳುವುದು ಕೂಡ ಅದಕ್ಕೆ ತಾನೇ? ಹಾಗಿರುವಾಗ ನನ್ನದೆಲ್ಲವೂ ಭಗವಂತನಿಗೆ ಅರ್ಪಿತವೆಂದು ಹೇಳಿದಾಕ್ಷಣ ಮೋಹ ಅಷ್ಟು ಸುಲಭವಾಗಿ ಹೋದೀತೆ? ನಿಜ, ಇದು ನಮ್ಮ ನಿಮ್ಮೆಲ್ಲರಲ್ಲೂ ಏಳುವ ಸಹಜ ಸಾಮಾನ್ಯ ಪ್ರಶ್ನೆ. ಕುರುಕ್ಷೇತ್ರದ ಯುದ್ಧದಲ್ಲಿ ಅರ್ಜುನನ್ನೂ ಕಾಡಿದ್ದು ಇದೇ ಪ್ರಶ್ನೆ. ಅದಕ್ಕೆ ಶ್ರೀಕೃಷ್ಣನ ಉತ್ತರ ಮನವೀಯವಾಗಿದೆ. ನೀನು ಯಾವುದನ್ನೆಲ್ಲ ನಿನ್ನದೆಂದು ತಿಳಿಯುವೆಯೋ ಅವೆಲ್ಲವು ನಿನ್ನ ಭ್ರಮೆ ಮತ್ತು ಭ್ರಾಂತೀಯ ಫಲ. ಸ್ವಪ್ನದಲ್ಲಿ ಕಂಡ, ಪಡೆದ ಸಂಒತ್ತು ನಿಜದ ಸಂಪತ್ತು ಆದೀತೇ? ಹಾಗೆಯೇ ಇದು. ನೀನು ಯಾವುದನ್ನು ನಿಜವೆಂದು ಭಾವಿಸುವೆಯೋ ಅದು ನಿಜಕ್ಕೂ ಮಾಯೆಯೇ ಆಗಿದೆ. ಈಗ ಅದು ಇದೆಯೆಂದು ನೀನು ತಿಳಿದರೆ ಮುಂದಿನ ಕ್ಷಣ ಇಲ್ಲವಾಗುವ ಲಕ್ಷಣವನ್ನು ಅದು ಹೊಂದಿದೆ. ಆದುದರಿಂದಲೇ ಅದು ದುಃಖಕಾರಕವಾಗಿದೆ. ಈ ಮಾಯೆಯನ್ನು ಗೆಲ್ಲಬೇಕಿದ್ದರೆ ಮನಸ್ಸು, ಇಂದ್ರಿಯಗಳು ಮತ್ತು ಶರೀರದ ಮೂಲಕ ನಡೆಯುವ ಸಮಸ್ತ ಕರ್ಮಗಳಲ್ಲಿ ನೀನು ಕರ್ತೃವೆಂಬ ಅಭಿಮಾನವನ್ನು ತಾಳಬೇಡ. ಎಲ್ಲರಲ್ಲಿಯೂ, ಎಲ್ಲದರಲ್ಲಿಯೂ ನೀನು ನನ್ನನ್ನೇ ಕಾಣು. ಆಗ ಮಾತ್ರವೇ ನಿನಗೆ ಮೋಹದಿಂದ ಮಾಯೆಯಿಂದ ಮುಕ್ತಿ. ಇದನ್ನೇ ನೀನು ಸಾಂಖ್ಯ ಯೋಗವೆಂದು ತಿಳಿದು ಆಚರಿಸು.

   

Related Articles

error: Content is protected !!