ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಶುಕ್ರವಾರ ಅಕ್ಷಯ ತೃತೀಯ ಪ್ರಯುಕ್ತ ರಾಮಲಲಾಗೆ 11,000 ಹಣ್ಣುಗಳ ನೈವೇದ್ಯ ಅರ್ಪಿಸಲಾಯಿತು. ಅಕ್ಷಯ ತೃತೀಯದಂದು ರಾಮಲಲಾಗೆ ವಿಶೇಷ ವಸ್ತ್ರದ ಅಲಂಕಾರ ಮಾಡಲಾಗಿತ್ತು. ಸಾಂಪ್ರಾಯಿಕ ಅಸ್ಸಾಮಿ ವಸ್ತ್ರವನ್ನು ಏರಿ ಮತ್ತು ಮೂಂಗಾ ರೇಷ್ಮೆ ಬಟ್ಟೆಯಲ್ಲಿ ಚಿನ್ನದ ಎಳೆಗಳನ್ನು ಬಳಸಿಕೊಂಡು ನೇಯಲಾಗಿದೆ. ಇದರಲ್ಲಿ ಶಂಖ, ಚಕ್ರ, ಗಧಾ, ಪದ್ಮ, ನವಿಲಿನಂತಹ ವೈಷ್ಣವ ಚಿಹ್ನೆಗಳನ್ನೂ ಬಳಸಲಾಗಿದೆ. ರಾಮಲಲಾಗೆ ವಿಶೇಷ ಆಭರಣಗಳ ಅಲಂಕಾರ ಮಾಡಲಾಗಿತ್ತು.
ಶ್ರೀರಾಮ ಜನ್ಮಭೂಮಿ ಮಂದಿರವನ್ನು ಆಕರ್ಷಕವಾಗಿ ಹೂವುಗಳಿಂದ ಅಲಂಕರಿಸ ಲಾಗಿತ್ತು, ಗರ್ಭಗೃಹದ ಬಾಗಿಲನ್ನು ಹಣ್ಣುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತು, ಜೊತೆಗೆ, ಶ್ರೀರಾಮಲಲಾಗೆ 11,000 ಹಣ್ಣುಗಳನ್ನು ಅರ್ಪಿಸಲಾಯಿತು. ಮುಖ್ಯವಾಗಿ ಮಾವಿನ ಹಣ್ಣು ದಾಳಿಂಬೆ, ಮೂಸಂಬಿ, ಕಿತ್ತಳೆ, ದ್ರಾಕ್ಷಿ, ಡ್ಯಾಗನ್ ಫೂಟ್, ಕೀವಿ ಹಣ್ಣು, ಹಸಿರು ಸೇಬು, ಅನಾನಸು, ಮರಸೇಬು ಮುಂತಾದ ಹಣ್ಣುಗಳ ನೈವೇದ್ಯ ವಸಂತ ಮಾಸದಲ್ಲಿ ರಾಮಲಲಾಗೆ ಸಮರ್ಪಿಸಲಾಯಿತು. ರಾಮನಗರಿಯಲ್ಲಿ ಅಕ್ಷಯ ತೃತೀಯ ಸಂದರ್ಭದಲ್ಲಿ ಭಕ್ತರು ಸರಯೂ ನದಿಯಲ್ಲಿ ಸ್ನಾನ ಮಾಡಿ, ಮಂದಿರಗಳಲ್ಲಿ ಪೂಜೆ ಸಲ್ಲಿಸಿದರು.