ಮೈಸೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ, ಎಸ್ಐಟಿ ತನಿಖೆ ಮಾಡುತ್ತಿದೆ. ನಮ್ಮ ಪೋಲಿಸರ ಬಗ್ಗೆ ನಂಬಿಕೆ ಇದೆ. ನಿಷ್ಪಕ್ಷಪಾತ ತನಿಖೆ ಮಾಡಿ ಅಧಿಕಾರಿಗಳು ವರದಿ ಕೊಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಸಿಬಿಐಗೆ ಒಂದೇ ಒಂದು ಕೇಸ್ ಕೊಡಲಿಲ್ಲ. ಬಿಜೆಪಿ ಅವರು ಸಿಬಿಐ ಅನ್ನು ಕರಪ್ಷನ್ ಬ್ಯೂರ್ ಆಫ್ ಇನ್ವೆಸ್ಟಿಗೇಶನ್ ಅನ್ನುತ್ತಿದ್ದರು. ಜೋರ್ ಬಚಾವ್ ಸಂಸ್ಥೆ ಅಂತ ದೇವೇಗೌಡರು ಹೇಳಿದ್ದರು. ಈಗ ನೋಡಿದ್ರೆ ಸಿಬಿಐಗೆ ಕೊಡಿ ಅನ್ನುತ್ತಿದ್ದಾರೆ. ಇದರರ್ಥ ಏನು ಎಂದರು.