Home » ವಿದ್ಯಾರ್ಥಿನಿಯನ್ನು ಹತ್ಯೆಗೈದ ಆರೋಪಿ ಪೊಲೀಸರಿಗೆ ಶರಣು
 

ವಿದ್ಯಾರ್ಥಿನಿಯನ್ನು ಹತ್ಯೆಗೈದ ಆರೋಪಿ ಪೊಲೀಸರಿಗೆ ಶರಣು

by Kundapur Xpress
Spread the love

ಕೊಡಗು : ಕೊಡಗಿನ ಸೋಮವಾರಪೇಟೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆಗೈದ ಆರೋಪಿ ಓಂಕಾರಪ್ಪ ಯಾನೆ ಪ್ರಕಾಶ್ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ ಸೋಮವಾರಪೇಟೆ ತಾಲೂಕಿನ ಸುರ್ಲಬಿ ಗ್ರಾಮದಲ್ಲಿ 16 ವರ್ಷದ ಮೀನಾ ಅನ್ನೋ ಬಾಲಕಿಯ ಜೊತೆ ಓಂಕಾರಪ್ಪ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಸಿದ್ಧವಾಗಿದ್ದ ಈ ವಿಚಾರ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅದನ್ನು ತಡೆದಿದ್ದರು ಇದರಿಂದ ಕೋಪಗೊಂಡ ಓಂಕಾರಪ್ಪ ಯಾನೆ ಪ್ರಕಾಶ್ ಗುರುವಾರ ರಾತ್ರಿ ಮೀನಾಳ ಮನೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಿ ಕಾಡಿನಂಚಿನಲ್ಲಿ ಅವಳ ರುಂಡವನ್ನು ಕಡಿದು ಕೊಲೆ ಮಾಡಿ ರುಂಡ ಸಮೇತ ಪರಾರಿಯಾಗಿದ್ದ

ನಿನ್ನೆ ಆರೋಪಿ ಓಂಕಾರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿಯು ಎಲ್ಲ ಕಡೆ ಹರಡಿತ್ತು ಆದರೆ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ

ಇತ್ತ ಪೊಲೀಸರು ಪೊಲೀಸ್‌ ಡಾಗ್‌ ಸ್ಕ್ವಾಡ್‌ ಸಹಾಯದಿಂದ ರುಂಡವನ್ನು ಪತ್ತೆ ಹಚ್ಚಿದ್ದು ಆರೋಪಿಯು ಕೊಲೆಯಾದ 300 ಮೀಟರ್ ಒಳಗಡೆಯಲ್ಲಿ ಇರುವ ಮಾವಿನ ಮರದ ಅಡಿಯಲ್ಲಿ ರುಂಡವನ್ನು ಬಚ್ಚಿಟ್ಟಿದ್ದ ಪೊಲೀಸರು ಪತ್ತೆ ಹಚ್ಚಿ ತನಿಖೆ ಕೈಗೊಂಡಿದ್ದಾರೆ

   

Related Articles

error: Content is protected !!