ಹೂಗ್ಲಿ ; ಆಡಳಿತಾರೂಢ ಟಿಎಂಸಿ, ದುಷ್ಕರ್ಮಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಟಿಎಂಸಿ ಆಳ್ವಿಕೆಯಲ್ಲಿ ಇಲ್ಲಿನ ಹಿಂದುಗಳು ದ್ವಿತೀಯ ದರ್ಜೆ ನಾಗರಿಕರಾಗಿ ಪರಿವರ್ತಿಸಲ್ಪಟ್ಟಿದ್ದಾರೆ. ಹಿಂದುಗಳ ಸ್ಥಿತಿ ತೀರಾ ದಯನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.
ಬರಾಕ್ ಪೋರ್ ಮತ್ತು ಹೂಗ್ಲಿಯಲ್ಲಿ ಸರಣಿ ರ್ಯಾಲಿಗಳಲ್ಲಿ ಮಾತನಾಡಿದ ಪ್ರಧಾನಿ ಅವರು, ಮೋದಿ ಇಲ್ಲಿರೋ ತನಕ ಸಿಎಎ ಕಾನೂನು ರದ್ದುಪಡಿಸಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಸಂತ್ರಸ್ತರಿಗೆ ಪೌರತ್ವ ಕಲ್ಪಿಸುವುದೇ ಸಿಎಎ ಆಶಯ ವಿನಾ ಯಾರದೇ ಪೌರತ್ವ ಕಸಿದುಕೊಳ್ಳುವುದಲ್ಲ, ಆದರೆ ವೋಟ್ ಬ್ಯಾಂಕ್ ರಾಜನೀತಿಯಡಿ ಸಿಎಎಯನ್ನು ಖಳನಾಯಕನಂತೆ ಚಿತ್ರಿಸಲಾಗಿದೆ. ಟಿಎಂಸಿ, ಕಾಂಗ್ರೆಸ್ ಗಳು ಸಿಎಎ ಬಗ್ಗೆ ಸಲ್ಲದ ಅಪಪ್ರಚಾರ ಮಾಡಿವೆ. ರಾಜ್ಯದ ಮತುವಾ ಸಮುದಾಯಕ್ಕೆ ಸಿಎಎಯಿಂದ ತುಂಬು ಪ್ರಯೋಜನವಾಗಲಿದೆ. ಮೋದಿ ಇರುವವರೆಗೆ ಯಾರೂ ಸಿಎಎಯನ್ನು ರದ್ದುಪಡಿಸಲಾರರು ಎಂದು ಗುಡುಗಿದರು.