Home » ಹೃದಯಾಘಾತದಿಂದ ವಿಚಾರಣಾಧೀನ ಖೈದಿ ಮೃತ್ಯು
 

ಹೃದಯಾಘಾತದಿಂದ ವಿಚಾರಣಾಧೀನ ಖೈದಿ ಮೃತ್ಯು

by Kundapur Xpress
Spread the love

ಉಡುಪಿ : ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕುಂದಾಪುರ ಮೂಲದ ಅನುಪ್ ಕುಮಾರ್ (35ವರ್ಷ) ಮೃತಪಟ್ಟ ವಿಚಾರಣಾಧೀನ ಖೈದಿ. ಕುಂದಾಪುರದ ಕಾಳಾವಾರದಲ್ಲಿ ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ 2021 ಆ.6 ರಿಂದ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದ, ಜೈಲಿನಲ್ಲಿದ್ದ ಅನುಪ ಕುಮಾರ್‌ನಿಗೆ ಮೇ 11 ರಂದು ವಾಂತಿಯಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ತಕ್ಷಣವೇ ಕರ್ತವ್ಯ ನಿರತ ಜೈಲು ಸಿಬ್ಬಂದಿ ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಖೈದಿ ಅನುಪ್ ಕುಮಾರ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   

Related Articles

error: Content is protected !!