Home » ರಾಮಲಲ್ಲಾನನ್ನು ಮತ್ತೆ ಡೇರೆಗೆ ಕಳಿಸಲು ಸಂಚು
 

ರಾಮಲಲ್ಲಾನನ್ನು ಮತ್ತೆ ಡೇರೆಗೆ ಕಳಿಸಲು ಸಂಚು

ಪ್ರಧಾನಿ ಮೋದಿ

by Kundapur Xpress
Spread the love

ಜಾರ್ಖಂಡ್‌ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳ ವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ‘ನಾಚಿಕೆ ಗೇಡಿನ’ ರಾಜಕೀಯದಲ್ಲಿ ತೊಡಗಿದೆ ಮತ್ತು ‘ಅಯೋಧ್ಯೆಯ ರಾಮಲಲ್ಲಾನನ್ನು ಮತ್ತೆ ಡೇರೆಗೆ ಕಳಿಸಲು ಸಂಚು ರೂಪಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಜಾರ್ಖಂಡ್‌ನ ಗಿರಿಡೀಹ್  ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಕಾಂಗ್ರೆಸ್ ನಾಯಕರು ರಾಮಮಂದಿರದ ಬಗ್ಗೆ ನಾಚಿಕೆಗೇಡಿನ ಹೇಳಿಕೆಗಳನ್ನು ನೀಡು ತ್ತಿದ್ದಾರೆ. ಅವರ ನಾಯಕರು ಮತ್ತೊಮ್ಮೆ ರಾಮಲಲ್ಲಾನನ್ನು ಟೆಂಟ್‌ಗೆ ಕಳುಹಿಸಲು ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮಾತನಾಡಲು ಸಂಚು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು. ಅಲ್ಲದೆ, ಕಾಂಗ್ರೆಸ್‌ನವರು ಮತ್ತೆ ಮಂದಿರ ಆವರಣಕ್ಕೆ ಬೀಗ ಹಾಕಲು ಬಯಸುತ್ತಾರೆ, ಅಂತಹ ‘ಭ್ರಷ್ಟ’ ಶಕ್ತಿಗಳನ್ನು ಹೊರಹಾಕಬೇಕು ಎಂದು ಜನತೆಗೆ ಮನವಿ ಮಾಡಿದರು.

   

Related Articles

error: Content is protected !!