ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸಿ ಟೀವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡುವಾಗ ತಾಯಿಯ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು. 2022ರಲ್ಲಿ ನಿಧನರಾದ ತಮ್ಮ ತಾಯಿ ಹೀರಾಬೆನ್ ಮೋದಿ ಅವರ ಸಲಹೆಯನ್ನು ನೆನಪಿಸಿಕೊಂಡ ಮೋದಿ, ‘ನನ್ನ ತಾಯಿಗೆ 100 ವರ್ಷ ತುಂಬಿದಾಗ ಮತ್ತು ಅವರ ಜನ್ಮದಿನದಂದು ನಾನು ಅವರನ್ನು ಭೇಟಿ ಯಾಗಲು ಹೋಗಿದ್ದೆ. ಆಗ ಲಂಚ ತೆಗೆದುಕೊಳ್ಳಬೇಡ ಮತ್ತು ಬಡವರನ್ನು ಮರೆಯಬೇಡ. ಬುದ್ದಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧ ಜೀವನ ನಡೆಸಿ ಎಂದು’ ಎಂಬುದಾಗಿ ನುಡಿಯುತ್ತ ಕಣ್ಣೀರು ಹಾಕಿದರು.