Home » ಕ್ರಿಯೇಟಿವ್‌ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ
 

ಕ್ರಿಯೇಟಿವ್‌ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಆಯ್ಕೆ

by Kundapur Xpress
Spread the love

ಕಾರ್ಕಳ Institute of Company Secretary of India ರವರು ಮೇ 4, 2024 ರಲ್ಲಿ ನಡೆಸಿದ ಅತ್ಯಂತ ಕಠಿಣಕರವಾದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪ.ಪೂ ಕಾಲೇಜಿನ ವಿದ್ಯಾರ್ಥಿಗಳಾದ ಭಕ್ತಿ ಕಾಮತ್, ಸಾನ್ವಿ ರಾವ್, ಶೆಟ್ಟಿ ತ್ರಿಶಾ ವಿಠ್ಠಲ್, ಹೃತಿಕ್,ಜೀವನ್ ಗೌಡ, ಆಶೆಲ್,ಕೀರ್ತಿ ಪಾಟ್ಕರ್, ಅನ್ವಿತ, ಭವಿಷ್ಯ ಶೆಟ್ಟಿ, ರಾಹುಲ್, ಅನನ್ಯ ಜೈನ್, ಪ್ರತ್ವೀಕ್, ಪ್ರಥಮ್,A.S ಚಿನ್ಮಯ, ಪ್ರಜ್ವಲ್ ರಾವ್, ಸುಖಿ ಸುಭಾಶ್, ಶ್ರೇಯಾ, ವಿನಯ್ ಪ್ರಶಾಂತ್, ಸುಪ್ರೀತ್ ಹೆಗ್ಡೆ, ಶ್ರೀ ಹರಿ ಹಾಗೂ ಸುವಿಕ್ಷಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್‌ನ ವಿದ್ಯಾರ್ಥಿಗಳು ಪಿ ಯು ಸಿ ಯಲ್ಲೇ ಮೊದಲ ಹಂತದಲ್ಲೇ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್‌ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಆಡಳಿತ ಮಂಡಳಿಯವರು, CSEET ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್,ಉಪನ್ಯಾಸಕ ವರ್ಗದವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

   

Related Articles

error: Content is protected !!