ಕುಂದಾಪುರ : ದ್ವೇಷ ರಾಜಕಾರಣದ ಪರಾಕಾಷ್ಠೆಯಾಗಿ ಪೆನ್ಡೈವ್ ಪ್ರಕರಣ ಕಾಣುತ್ತಿದ್ದು ತಪ್ಪು ಮಾಡಿದ ಯಾರೇ ಆದರೂ ಈ ನೆಲದ ಕಾನೂನಿನಡಿ ಶಿಕ್ಷೆ ಅನುಭವಿಸಲೇಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂಗಳೇ ಪೆನ್ಡೈವ್ ಘಟನೆಯಲ್ಲಿ ದ್ವೇಷ ಸಾಧಿಸುತ್ತಿರುವಂತೆ ಕಂಡು ಬರುತ್ತಿದೆ. ದೂರು ನೀಡಿದವರೇ ಘಟನೆಯೇ ನಡೆದಿಲ್ಲ ಎಂದಿದ್ದರೂ ರೇವಣ್ಣರ ಬಂಧನ ಆಗಿರುವುದು ಹಲವು ಅನುಮಾನಗಳಿಗೆ ಕಾರಣ ವಾಗಿದೆ. ಆರೋಪಿಯನ್ನು ವಿದೇಶಕ್ಕೆ ಹಾರಲು ಬಿಟ್ಟದ್ದು ರಾಜ್ಯ ಸರಕಾರವೇ ವಿನಾ ಕೇಂದ್ರ ಅಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಇದರ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದರು.
ರಾಜ್ಯದೆಲ್ಲೆಡೆ ಇರುವ ಇಂತಹ ಭೀಕರ ಬರ ಪರಿಸ್ಥಿತಿಯಲ್ಲೂ ಮಂತ್ರಿಗಳು ಪೆನ್ಡೈವ್ ಹಿಡಿದುಕೊಂಡು ತಿರುಗುತ್ತಿದ್ದಾರೆ. ಬರದ ಕಡೆ ಗಮನವೇ ಇಲ್ಲ. ರಾಜ್ಯ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.