ಕೋಟ: ಇಲ್ಲಿನ ಸಾಸ್ತಾನ ಟೋಲ್ ವಿನಾಯ್ತಿ ಕಳ್ಳಾಟದ ವಿರುದ್ಧ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಹೋರಾಟ ತೀವ್ರಗೊಳಿಸಿದ್ದು ಶನಿವಾರ ಟೋಲ್‍ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಹಿಂದೆ ಇದ್ದ ಯಥಾಸ್ಥಿತಿ ಟೋಲ್ ವಿನಾಯ್ತಿಗಾಗಿ ಆಗ್ರಹಿಸಿತ್ತು. ಈ ನಡುವೆ ಭಾನುವಾರ ಸಹ ಸ್ಥಳೀಯ ವಾಹನ ಮಾಲಕರು ಟೋಲ್ ಗೇಟ್ ತೆರಳಿ ವಾಹನ ಅಡ್ಡ ಇರಿಸಿ ಪ್ರತಿಭಟಿಸಿ ಕಳ್ಳಾಟದ ಮೂಲಕ ಕಲೆಹಾಕಿದ ಹಣವನ್ನು ಹಿಂಪೆಡದರು.
ಶುಕ್ರವಾರ ವಾಹನ ಮಾಲಕ ರಾಜೇಶ್ ಕೆ.ವಿ ಸಾಸ್ತಾನ ಇವರ ವಾಹನ ಟೋಲ್ ಗೇಟ್ ಪಾಸಾದ ಸಂದರ್ಭದಲ್ಲಿ ಜೀರೋ ಬ್ಯಾಲೆನ್ಸ್ ತೋರಿಸಿತ್ತು.ಮಾರನೆ ದಿನ ತನ್ನ ಖಾತೆಯಿಂದ 60.ರೂ ಕಟ್ ಆಗಿರುವ ಸಂದೇಶ ಮೊಬೈಲ್ ಮೂಲಕ ಗಮನಿಸಿದರು, ಇದರಿಂದ ಆಕ್ರೋಶಗೊಂಡ ರಾಜೇಶ್ ಭಾನುವಾರ ಕಾರನ್ನು ಟೋಲ್ ಅಡ್ಡ ಇರಿಸಿ ವಾಹನದ ಎದುರುಗಡೆ ಕುಳಿತು ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಹಾಗೂ ರಾಜೇಶ್ ನಡುವೆ ಮಾತಿನಚಕಮಕಿ ನಡೆಯಿತು, ಅಷ್ಟರೊಳಗೆ ಟೋಲ್ ಗೇಟ್‍ನಲ್ಲಿ ಸಾಲು ಸಾಲು ವಾಹನ ನಿಂತಿರುವುದನ್ನುಗಮನಿಸಿದ ಸಿಬ್ಬಂದಿ ಹಣ ವಾಪಾಸ್ ನೀಡಿ ಸೋಮವಾರ ಈ ಸಮಸ್ಯೆ ಕುರಿತು ಕಂಪನಿ ಪ್ರಮುಖರ ಮೂಲಕ ಮಾತುಕತೆ ನಡೆಯಲಿದೆ ಅಲ್ಲಿಯ ವರೆಗೆ ಯಾವುದೇ ರೀತಿ ಸಮಸ್ಯೆ ಮಾಡಿದಂತೆ ಮನವಿ ಮಾಡಿದರು.
ನಾವು ಈ ಭಾಗದ ಸ್ಥಳೀಯರು ದಿನಕ್ಕೆ ನಾಲ್ಕೈದು ಬಾರಿ ಸಂಚರಿಸಲಿದ್ದೇವೆ ಹಾಗೆಂದ ಮಾತ್ರಕ್ಕೆ ಬಾರಿ ಪ್ರಮಾಣದಲ್ಲಿ ಟೋಲ್ ಕಟ್ಟಬೇಕೆ ಇದು ಸರಿಯೇ ನಮ್ಮೂರಲ್ಲಿ ಟೋಲ್ ಹಾಕಿ ನಮ್ಮ ಬಳಿಯೇ ಟೋಲ್ ವಸೂಲಿ ಮಾಡುವುದಾದರೇ ಇದೆಂಥ ಕಾನೂನು ವಿಪರ್ಯಾಸವೇ ಸರಿ ಇದಕ್ಕೆ ಅವಕಾಶ ನೀಡಲ್ಲ ನಮ್ಮ ಹೆದ್ದಾರಿ ಜಾಗೃತಿ ಸಮಿತಿಯ ಮೂಲಕ ನ್ಯಾಯ ಕಂಡುಕೊಳ್ಳಲಿದ್ದೇವೆ