Home » ಸ್ವಾವಲಂಬಿ ಬದುಕಿಗೆ ಸ್ವಉದ್ಯೋಗ ಸಹಕಾರಿ
 

ಸ್ವಾವಲಂಬಿ ಬದುಕಿಗೆ ಸ್ವಉದ್ಯೋಗ ಸಹಕಾರಿ

-ಸಚಿನ್ ಹೆಗ್ಡೆ

by Kundapur Xpress
Spread the love

ಕೋಟ : ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಾಗ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ ಇದರ ಮುಖ್ಯ ಕಾರ್ಯನಿರ್ವಹಾಧಿಕಾರಿ ಸಚಿನ್ ಹೆಗ್ಡೆ ನುಡಿದರು.
ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ ಇವರ ನೇತೃತ್ವದಲ್ಲಿ ಪ್ರಕೃತಿ ಸಂಜೀವಿ ಒಕ್ಕೂಟ, ಕೋಟ ಗ್ರಾಮಪಂಚಾಯತ್ ಇವರ ಸಹಯೋಗದೊಂದಿಗೆ ಒಂದು ವಾರಗಳ ಸ್ವಉದ್ಯೋಗ ಎಂಬ್ರಾಯ್ಡಿAಗ್ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ತರಬೇತಿಯುಕ್ತ ಸ್ವಉದ್ಯೋಗದಲ್ಲಿ ಕೈಜೋಡಿಸಿಕೊಳ್ಳಬೇಕು,ಶಿಸ್ತು ಶ್ರದ್ಧೆ ಇದ್ದರೆ ಬದುಕಿನಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ,ಪ್ರಸ್ತುತ ಸಾಮಾಜಿಕ ಜಾಲತಾಣದ ವ್ಯವಸ್ಥೆಯಲ್ಲಿ ತಮ್ಮ ಸ್ವಉದ್ಯೋಗದಿಂದ ಸೃಷ್ಟಿಯಾದ ವಸ್ತುವನ್ನು ಮಾರ್ಕೆಟಿಂಗ್ ಸುಲಭವಾಗಿ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ.ಬಿ.ಶೆಟ್ಟಿ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್ ವಹಿಸಿದ್ದರು.
ತರಬೇತುದಾರರಾಗಿ ಆರತಿರಾಜ್ ಭಾಗವಹಿಸಿದರು. ಮುಖ್ಯ ಅಭ್ಯಾಗತರಾಗಿ ಕೋಟ ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಭಂದಕಿ ಸಹನಾ, ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು. ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್ ಉಪನ್ಯಾಸಕ ರಾಘವೇಂದ್ರ ಆಚಾರ್ಯ ಪ್ರಾಸ್ತಾವನೆ ಸಲ್ಲಿಸಿದರು.ಪ್ರಕೃತಿ ಸಂಜೀವಿನಿಒಕ್ಕೂಟದ ಎಲ್ ಸಿ ಆರ್ ಪಿ ಭಾರತಿ ಸ್ವಾಗತಿಸಿದರು.ಮಾಜಿ ಅಧ್ಯಕ್ಷೆ ಕಲಾವತಿ ಅಶೋಕ್ ನಿರೂಪಿದರು. ಸಂಜೀವಿನಿ ಒಕ್ಕೂಟದ ಲಲಿತಾ ಪೂಜಾರಿ ವಂದಿಸಿದರು.ಎAಬಿಕೆ ಪ್ರೇಮ ಸಹಕರಿಸಿದರು.

ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ ಮಣಿಪಾಲ ಇವರ ನೇತೃತ್ವದಲ್ಲಿ ಪ್ರಕೃತಿ ಸಂಜೀವಿ ಒಕ್ಕೂಟ, ಕೋಟ ಗ್ರಾಮಪಂಚಾಯತ್ ಇವರ ಸಹಯೋಗದೊಂದಿಗೆ ಒಂದು ವಾರಗಳ ಸ್ವಉದ್ಯೋಗ ಎಂಬ್ರಾಯ್ಡಿಂಗ್ ತರಬೇತಿ ಕಾರ್ಯಕ್ರಮದಲ್ಲಿ ಕೋಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ದೀಪಬೆಳಗಿಸಿದರು. ಕೋಟ ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಭಂದಕಿ ಸಹನಾ, ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಉಪಸ್ಥಿತರಿದ್ದರು.

   

Related Articles

error: Content is protected !!