Home » ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆ ಇದೆ
 

ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆ ಇದೆ

ಡಾ.ಸುಮಂಗಲ

by Kundapur Xpress
Spread the love

ಕೋಟ: ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯತೆ ಇದೆ ಎಂದು ತೆಕ್ಕಟ್ಟೆ ಶ್ರೀ ದೇವಿ ಕ್ಲಿನಿಕ್ ವೈದ್ಯೆ ಡಾ.ಸುಮಂಗಲ ಹೇಳಿದರು. ಕೋಟದ ಪಂಚವರ್ಣ ಮಹಿಳಾ ಮಂಡದ ಆಶ್ರಯದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಹಾಗೂ ಕೋಟ ಗ್ರಾ.ಪಂ ಸಹಯೋಗದೊಂದಿಗೆ ಅರಿವು ನಿಮ್ಮಗಿರಲಿ ನೆರವು 9 ನೇ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರಿಗೆ ಸ್ತನ,ಗರ್ಭಕೋಶದ ಕ್ಯಾನ್ಸರ್ ಅತಿಯಾಗಿ ಕಾಣುತ್ತಿದ್ದೇವೆ, ದೈಹಿಕವಾಗಿ ವಿವಿಧ ರೋಗಗಳು ವ್ಯಾಪಿಸಿಕೊಳ್ಳುತ್ತಿದೆ ಇದರ ಭಾಗವಾಗಿ ನಮ್ಮ ಆಹಾರ ಕ್ರಮ,ದೈನಂದಿನ ಜೀವನ ಪದ್ದತಿಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು.ಮಾಸಿಕವಾಗಿರುವ ಕೆಲವು ಅಂಶಗಳ ಬಗ್ಗೆ ಮಾಹಿತಿ ನೀಡಿದ ಅವರು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ವಿವಿರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟದ ಶಿಶು ಮಂದಿರ ವ್ಯವಸ್ಥಾಪಕಿ ಭಾಗ್ಯವಾದಿರಾಜ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ತರಬೇತುದಾರೆ ಆರತಿರಾಜ್ ಮತ್ತಿತರರು ಇದ್ದರು. ಪಂಚವರ್ಣ ಮಹಿಳಾ ಮಂಡಲ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.

ಕೋಟದ ಪಂಚವರ್ಣ ಮಹಿಳಾ ಮಂಡದ ಆಶ್ರಯದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಹಾಗೂ ಕೋಟ ಗ್ರಾ.ಪಂ ಸಹಯೋಗದೊಂದಿಗೆ ಅರಿವು ನಿಮ್ಮಗಿರಲಿ ನೆರವು 9 ನೇ ಮಾಲಿಕೆ ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ತೆಕ್ಕಟ್ಟೆ ಶ್ರೀ ದೇವಿ ಕ್ಲಿನಿಕ್ ವೈದ್ಯೆ ಡಾ.ಸುಮಂಗಲ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟದ ಶಿಶು ಮಂದಿರ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಮತ್ತಿತರರು ಇದ್ದರು.

   

Related Articles

error: Content is protected !!