ಸುಬ್ರಹ್ಮಣ್ಯ ಶಿವ ಪಾರ್ವತಿಯರ ಪುತ್ರ. ಈತನಿಗೆ ಕಾರ್ತಿಕೇಯ ಎಂಬ ಹೆಸರು ಕೂಡ ಇದೆ. ನವಿಲು ಸುಬ್ರಹ್ಮಣ್ಯನ ವಾಹನ ಸುಬ್ರಹ್ಮಣ್ಯ ಸರ್ಪಗಳಿಗೆ ಅಧಿಪತಿ ಸುಬ್ರಹ್ಮಣ್ಯ ಗಣಪನ ಸಹೋದರ ಎಲ್ಲಾ ಸರ್ಪದೋಷಗಳಿಗೂ ಸುಬ್ರಹ್ಮಣ್ಯದಲ್ಲಿ ದೋಷ ಮುಕ್ತಿ ಎಂಬ ನಂಬಿಕೆ ಜನರಲ್ಲಿ ಇದೆ. ಸರ್ಪ ಸಂಸ್ಕಾರ ,ಆಶ್ಲೇಷ ಬಲಿ ಮೊದಲಾದ ಅನೇಕ ಪೂಜೆಗಳು ಸುಬ್ರಹ್ಮಣ್ಯದಲ್ಲಿ ನಡೆಯುತ್ತವೆ. ಸುಬ್ರಹ್ಮಣ್ಯ ಕ್ಷೇತ್ರದಷ್ಟೇ ಪ್ರಸಿದ್ಧಿ ಹೊಂದಿರುವ ಮತ್ತು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹೇಳಿದಂತಹ ಹರಕೆಗಳನ್ನ ಮಾಡುವಂತಹ ಇನ್ನೊಂದು ಕ್ಷೇತ್ರವಿರುವುದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ದಕ್ಷಿಣ ಕನ್ನಡದ ಗಡಿ ಭಾಗದಲ್ಲಿರುವ ಪ್ರಕೃತಿಯ ಮಡಿಲಲ್ಲಿರುವ ರಮಣೀಯ ಸುಂದರ ದೇವಸ್ಥಾನವೇ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನ
ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯಿಂದಲೂ ಕಾರಣಿಕತೆಯ ಶಕ್ತಿಯಿಂದಲೂ ಭಕ್ತರ ಭಕ್ತಿ ಭಾವೈಕ್ಯತೆಯ ಸಂಗಮದಿಂದಲೂ ಕಾಸರಗೋಡು ತಾಲೂಕಿನ ಪಡ್ರೆ ,ಕಾಟುಕುಕ್ಕೆ ಶೇಣಿ 4 ಗ್ರಾಮಗಳ ಮುಖ್ಯ ದೇವಸ್ಥಾನವಾಗಿ ಭಕ್ತರ ಅಭಯ ಕೇಂದ್ರವಾಗಿದೆ ಕಾಟುಕುಕ್ಕೆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ