Home » ಯುಸಿಸಿ ಹಾಗೂ ಒಂದು ದೇಶ ಒಂದು ಚುನಾವಣೆ ಪದ್ಧತಿ ಜಾರಿ
 

ಯುಸಿಸಿ ಹಾಗೂ ಒಂದು ದೇಶ ಒಂದು ಚುನಾವಣೆ ಪದ್ಧತಿ ಜಾರಿ

by Kundapur Xpress
Spread the love

ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನಾತ್ಮಕ ಜನಾದೇಶ ಲಭಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಸಂಬಂಧಪಟ್ಟ ಎಲ್ಲರ ಜೊತೆ ಸಮಾಲೋಚಿಸಿ ಸಮಾನ ನಾಗರಿಕ ನೀತಿ ಸಂಹಿತೆ (ಯುಸಿಸಿ) ಅನುಷ್ಠಾನ ಮತ್ತು ಒಂದು ದೇಶ ಒಂದು ಚುನಾವಣೆ ಪದ್ಧತಿಯನ್ನು ಜಾರಿಗೊಳಿ ಸಲಾಗುವುದು. ಇದು  ಒಂದು ದೊಡ್ಡ ಸಾಮಾಜಿಕ, ಶಾಸನಾತ್ಮಕ ಮತ್ತು ಧಾರ್ಮಿಕ ಸುಧಾರಣೆಗಳಿಗೆ ಕಾರಣವಾಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದಾರೆ.

ಏಕಕಾಲದಲ್ಲಿ ದೇಶದಲ್ಲಿ ಚುನಾವಣೆ ನಡೆಸುವುದರಿಂದ ದೇಶದ ಬೊಕ್ಕಸಕ್ಕಾಗುವ ಹೊರೆ ಕಡಿಮೆಯಾಗಲಿದೆ ಮತ್ತು ಅಭಿವೃದ್ಧಿಗೆ ಆಗುವ ಆಡಳಿತಾತ್ಮಕ ತೊಡಕುಗಳು ನಿವಾರಣೆಯಾಗಿ ಅಭಿವೃದ್ಧಿಗೆ ವೇಗ ತರಬಹುದಾಗಿದೆ ಎಂಬ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ ಒಂದು ಚುನಾವಣೆ ಪದ್ಧತಿ ಜಾರಿಗೆ ಆಸಕ್ತಿ ತೋರಿದ್ದು, ಇದರ ಹಿನ್ನೆಲೆಯಲ್ಲಿ ಅಮಿತ್ ಶಾ ಹೇಳಿಕೆ ಮಹತ್ವ ಪಡೆದಿದೆ. ಈಗ ಬಿರು ಬೇಸಿಗೆಯಲ್ಲಿ ಚುನಾವಣೆ ನಡೆಸುವ ಬದಲು ಚಳಿಗಾಲ ಅಥವಾ ವರ್ಷದ ಇತರ ಸಮಯದಲ್ಲಿ ನಡೆಸುವ ಸಾಧ್ಯತೆ ಬಗ್ಗೆ ಕೇಳಿದಾಗ ಈ ಬಗ್ಗೆ ನಾವು ಯೋಚಿಸಬಹುದಾಗಿದೆ. ಒಂದು ಚುನಾವಣೆಯನ್ನು ಅವಧಿ ಮುಂಚಿತವಾಗಿ ನಡೆಸಿದರೆ ಇದು ಸಾಧ್ಯ. ಇದು ಮಕ್ಕಳ ರಜಾ ಕಾಲವೂ ಆಗಿದ್ದು, ಹಲವು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಕ್ರಮೇಣ ಇದನ್ನು ವ್ಯತ್ಯಾಸ ಮಾಡಬಹುದಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

   

Related Articles

error: Content is protected !!