ಚೆನ್ನೈ : 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆಗಿ ಕೋಲ್ಕತಾ ನೈಟ್ ರೈಡರ್ಸ್ ಹೊರಹೊಮ್ಮಿದೆ. ಭಾನುವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತಾ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುಧ್ದ 8 ವಿಕೆಟ್ ಗಳ ಭಾರಿ ಗೆಲುವು ದಾಖಲಿಸಿದೆ ಕೆಕೆಆರ್ ಗೆ ಇದು 3ನೇ ಐಪಿಎಲ್ ಟ್ರೋಫಿ 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ಕೋಲ್ಕತಾ 10 ವರ್ಷಗಳ ಬಳಿಕ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ
ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ 18.3 ಓವರ್‌ಗಳಲ್ಲಿ 113 ರನ್ ಗಳಿಸಿತು. ಕೋಲ್ಕತ್ತಾ ತಂಡ 10.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಕಲೆ ಹಾಕಿತು. 114 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸುನಿಲ್ ನರೈನ್ (6ರನ್) ವೇಗಿ ಕಮಿನ್ಸ್‌ಗೆ ಬಲಿಯಾದರು. ರೆಹಮಾನ್ ಹುಲ್ಲಾ ಗುರ್ಬಜ್ ಜತೆಗೂಡಿದ ವೆಂಕಟೇಶ್ ಅಯ್ಯರ್ ಎರಡನೆ ವಿಕೆಟ್‌ಗೆ 91 ರನ್ ಜತೆಯಾಟ ನೀಡಿದರು. 39 ರನ್ ಗಳಿಸಿದ್ದ ರಹಮಾನ್ ಹುಲ್ಲಾ ಶಹಬಾಜ್‌ಗೆ ಬಲಿಯಾದರು. ವೆಂಕಟೇಶ್ ಅಯ್ಯರ್ 24 ಎಸೆತಗಳಲ್ಲಿ ಅರ್ಧ ಶತಕ ಹೊಡೆದರು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 6 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ ಅಜೇಯ 52 ರನ್ ಗಳಿಸಿದರು. ಸನ್ ರೈಸರ್ಸ್ ಪರ ಕಮಿನ್ಸ್ ಮತ್ತು ಶಹಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆದರು