ಫಲಶ್ರುತಿಯಲ್ಲಿ ಆಸೆಯನ್ನು ಇಟ್ಟುಕೊಂಡರೆ ಏನು ತಪ್ಪು? ನಾವು ಮಾಡುವ ಕೆಲಸಕ್ಕೆ ನಮಗೆ ರಿವಾರ್ಡ್ ಸಿಗದಿದ್ದರೆ ಹೇಗೆ? ರಿವಾರ್ಡ್ ಇಲ್ಲವೆಂದಾದರೆ ಕೆಲಸ ಮಾಡುವುದರಲ್ಲಿ ನಮಗೆ ಉತ್ಸಾಹ ಬರುವುದಾದರೂ ಹೇಗೆ? ಸಂಬಳದ ಆಸೆಯಿಲ್ಲದೆ ನೌಕರಿ ಮಾಡಲು ಸಾಧ್ಯವೇ? ಹಾಗಿರುವಾಗ ಫಲಶ್ರುತಿಯ ಆಸೆಯನ್ನು ತೊರೆಯುವುದಾದರೂ ಹೇಗೆ? ಅದೆಷ್ಟು ಪ್ರ್ಯಾಕ್ಟಿಕಲ್ ಆದೀತು? ಇವೇ ಪ್ರಶ್ನೆಗಳಲ್ಲವೇ ನಮ್ಮನ್ನು ದಿನನಿತ್ಯ ಕಾಡುವುದು? ಮೇಲ್ನೋಟಕ್ಕೆ ಈ ವಾದವೇನೋ ಸರಿ ಎಂದೆ ಅನ್ನಿಸುವುದರಲ್ಲಿ ತಪ್ಪಿಲ್ಲ. ಆದರೆ ಚೆನ್ನಾಗಿ ಯೋಚಿಸಿ ನೋಡಿದರೆ ಫಲಶ್ರುತಿಗಿಂತಲೂ ಕರ್ತವ್ಯ ಪ್ರಜ್ಞೆಯಿಂದ ಮಾಡಲ್ಪಟ್ಟ ಕ್ರಿಯೆಯಲ್ಲೇ ಅತ್ಯಧಿಕ ಆತ್ಮತೃಪ್ತಿ ಲಭಿಸಿದ ಅನುಭವ ಆಗಿಲ್ಲವೇ? ಫಲಶ್ರುತಿಯಲ್ಲಿ ಆಸೆಯಿಟ್ಟು ಭೋಗ–ಐಶ್ವರ್ಯಾದಿಗಳ ಪ್ರಾಪ್ತಿಗಾಗಿಯೇ ಹಂಬಲಿಸುವವರ ಮನಸ್ಸು ಕೊನೆಗೂ ನೆಟ್ಟಿರುವುದು ಯಾವುದರಲ್ಲಿ? ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ಕೃಷ್ಣ ಅಂತಹ ಭಕ್ತರನ್ನು ಎಚ್ಚರಿಸುವ ಪರಿ ಹೀಗಿದೆ. ಭೋಗ–ಐಶ್ವರ್ಯಗಳನ್ನು ಬಯಸುವ ಸಕಾಮೀ ಪುರುಷರ ಮನಸ್ಸು ಆ ಬಯಕೆಯಿಂದಲೇ ಅಪಹರಿಸಲ್ಪಡುತ್ತದೆ. ಹಾಗೆ ಅಪಹರಣಗೊಂಡ ಮನಸ್ಸು ಎಷ್ಟು ಮಾತ್ರಕ್ಕೂ ಸ್ಥಿರವಾದ ಬುದ್ಧಿಯನ್ನು ಹೊಂದಿರುವ ಸಾಧ್ಯತೆಯೇ ಇಲ್ಲ. ಹಾಗಿರುವಾಗ ಫಲಾಪೇಕ್ಷೆಯನ್ನು ಹೊಂದಿರುವ ಪುರುಷರಿಗೆ ಪರಮಾತ್ಮನಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಸಾಧ್ಯವೇ?
6. ಮನಸ್ಸಿನ ಸ್ಥಿರತೆ
146
previous post