Home » ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರ
 

ಮಹಿಳೆಯರಿಗೆ ಮಾಹಿತಿ ಕಾರ್ಯಾಗಾರ

by Kundapur Xpress
Spread the love

ಕೋಟ: ಸ್ನೇಹ ಕೂಟ ಮಣೂರು ಇದರ ಮೇ ತಿಂಗಳ ಸ್ನೇಹಕೂಟದ ಭಾಗವಾಗಿ ಮಹಿಳೆಯರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ  ನೀಲಾವರ ಸುರೇಂದ್ರ ಅಡಿಗರ ಮನೆಯಲ್ಲಿ ಭಾನುವಾರ ಆಯೋಜಿಸಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಆಯುಷ್ ವಿಭಾಗದ ಮುಖ್ಯಸ್ಥರಾದ ಸ್ವಾತಿ.ಜಿ.ಶೇಟ್ ವೈದ್ಯಕೀಯ ಮಾಹಿತಿಯನ್ನು ನೀಡಿ ಮಾತನಾಡಿ ಸ್ತ್ರೀಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹಾಗೆ ಸ್ತನದ ಕ್ಯಾನ್ಸರ್ ಬಹುತೇಕವಾಗಿ ಕಾಡುತ್ತಿರುವ ಈ ಸಮಯದಲ್ಲಿ ಮಹಿಳೆಯರಿಗೆ ಈ ಒಂದು ಕಾಯಿಲೆಯೂ ಬಾರದ ರೀತಿಯಲ್ಲಿ ಹೇಗೆ ಮುಂಜಾಗ್ರತಾ ಕ್ರಮಗಳ ಕುರಿತು ಅಥವಾ ಖಾಯಿಲೆ ಬಂದ ಮೇಲೆ ನಾವು ಯಾವ ರೀತಿಯಾಗಿ ಅದನ್ನ ನಾವು ನಿರ್ವಹಣೆ ಮಾಡಬಹುದು ಮಾಹಿತಿಯನ್ನು ನೀಡಿದರಲ್ಲದೆ ಮಹಿಳೆಯರಿಗೆ ಈ ರೀತಿಯ ಜ್ಞಾನದ ಅರಿವು ಕಡಿಮೆ ಇರುವುದಕ್ಕಾಗಿಯೇ ಬಹುತೇಕ ಕಾಯಿಲೆಗಳು ಅವರನ್ನು ಕಾಡುತ್ತವೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯು ತನ್ನ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ತನಗಾಗಿ ಕೆಲವು ಸಮಯವನ್ನು ಮೀಸಲಿಡಬೇಕು, ಎಂಬುದರ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಸ್ನೇಹ ಕೂಟ ಸಂಚಾಲಕಿ ಭಾರತಿಮಯ್ಯ ಸ್ನೇಹಕೂಟದ ಬಗ್ಗೆ ಪ್ರಾಸ್ತಾವನೆ ಸಲ್ಲಿಸಿದರು. ಸದಸ್ಯೆ ವನಿತಾ ಉಪಾಧ್ಯ ಹಿಂದಿನ ತಿಂಗಳ ವರದಿಯನ್ನು ವಾಚಿಸಿದರು. ಸುಜಾತ ಬಾಯಿರಿ ಸ್ವಾತಿ.ಜಿ.ಶೇಟ್ ಅವರ ಪರಿಚಯ ಪತ್ರವನ್ನು ವಾಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅರಿಸಿನ ಕುಂಕುಮ ಹಚ್ಚಿ ಫಲಪುಷ್ಪದೊಂದಿಗೆ ಬಾಗಿನ ನೀಡಿ ಸಾಂಪ್ರದಾಯಿಕವಾಗಿ ಸನ್ಮಾನಿಸಲಾಯಿತು. ವಿನಯ ಉಡುಪ ಧನ್ಯವಾದ ಸಮರ್ಪಣೆಗೈದರು. ಗಾಯತ್ರಿ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ಸ್ನೇಹ ಕೂಟ ಸಂಚಾಲಕಿ ಭಾರತಿ ಮಯ್ಯ ಉಪಸ್ಥಿತರಿದ್ದರು

   

Related Articles

error: Content is protected !!