Home » ಸರ್ಕಾರದ ವಿರುದ್ಧ ಗಂಟಿಹೊಳೆ ಆಕ್ರೋಶ
 

ಸರ್ಕಾರದ ವಿರುದ್ಧ ಗಂಟಿಹೊಳೆ ಆಕ್ರೋಶ

by Kundapur Xpress
Spread the love

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲು ಸಂಕಗಳ ತುರ್ತು ಅವಶ್ಯಕತೆ ಹೆಚ್ಚಿದೆ. ಕಳೆದ ವರ್ಷ ನರೇಗಾ ಯೋಜನೆ ಅಡಿ ಕಾಲುಸಂಕಗಳ ನಿರ್ಮಾಣಕ್ಕೆ ಅವಕಾಶ ನೀಡಿಲಾಗಿತ್ತು. ಈ ಬಾರಿ ರಾಜ್ಯ ಸರ್ಕಾರ ಏಕಾಏಕೀ ಅವಕಾಶ ನಿರಾಕರಣೆ ಮಾಡಿರುವು ಸರಿಯಲ್ಲ. ಸರ್ಕಾರದ ಇಂತಹ ಕ್ರಮದಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೈಂದೂರಿನ ಗ್ರಾಮೀಣ ಭಾಗದಲ್ಲಿ ಕಾಲು ಸಂಕಗಳು ಹೆಚ್ಚೆಚ್ಚು ನಿರ್ಮಾಣ ಆಗಬೇಕಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಕಾಲು ಸಂಕಗಳ ನಿರ್ಮಾಣ ಪ್ರಗತಿ ಆಮೆ ಗತಿಯಲ್ಲಿ ಸಾಗುತ್ತಿದೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಕಾಲು ಸಂಕಗಳಿವೆ, ಎಷ್ಟು ಕಾಲು ಸಂಕಗಳ ದುರಸ್ತಿ ಬಾಕಿ ಇದೆ ಎಂಬಿತ್ಯಾದಿ ಮಾಹಿತಿಯನ್ನು ಪಿಡಿಒ ಮೂಲಕವೇ ಸಮೀಕ್ಷೆ ನಡೆಸಿ ಪಡೆಯಲಾಗಿದೆ. ಇದಾದ ನಂತರದಲ್ಲಿ ನರೇಗಾದಡಿ ಕಾಲು ಸಂಕ ನಿರ್ಮಿಸಲು ಅವಕಾಶ ಕಲ್ಪಿಸಲಾಗಿತ್ತು. ಹಲವು ಗ್ರಾಮ ಪಂಚಾಯತಿಗಳಲ್ಲಿ ನರೇಗಾದ ಅನುದಾನ ಬಳಸಿಯೇ ಕಾಲು ಸಂಕ ನಿರ್ಮಿಸುವ ಕಾರ್ಯವೂ ಆಗುತ್ತಿದೆ. ಇದೀಗ ದಿಢೀರ್ ಆಗಿ ನರೇಗಾದಡಿ ಕಾಲು ಸಂಕ ನಿರ್ಮಿಸಲು ಅವಕಾಶ ಇಲ್ಲ ಎನ್ನುವ ಜಿಲ್ಲಾ ಪಂಚಾಯತಿ ಹಾಗೂ ಸರ್ಕಾರದ ನಿಲುವಿನಲ್ಲಿ ಅರ್ಥವಿಲ್ಲ.‌ ತಾಂತ್ರಿಕವಾಗಿ ಯಾವುದೇ ಸಮಸ್ಯೆ ಇದ್ದರೂ ಸರಿಪಡಿಸಿಕೊಳ್ಳಬೇಕು. ನರೇಗಾ ನಿಯಮಾನುಸಾರವಾಗಿ ಈ ಹಿಂದೆ ಕಾಲು ಸಂಕಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಂತೆ ಈಗಲೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮಳೆಗಾಲ ಸಮೀಪಿಸುತ್ತಿದೆ. ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಆಗುತ್ತಿದೆ. ಇಂತಹ ಸಂದರ್ಭಗಳಲ್ಲಿ ತುರ್ತಾಗಿ ಆಗಬೇಕಿರುವ ಕಾಮಗಾರಿಗಳಿಗೆ ಅವಕಾಶ ನೀಡದೇ ಇರುವುದು ಸರಿಯಲ್ಲ. ಸರ್ಕಾರದಿಂದ ತುರ್ತು ಕ್ರಮ ಆಗಬೇಕು ಮತ್ತು ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ನರೇಗಾದಡಿ ಕಾಲು ಸಂಕ ನಿರ್ಮಿಸಲು ತಕ್ಷಣವೇ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಹಳ್ಳಿಹೊಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಪ್ರದೀಪ್ ಹಳ್ಳಿಹೊಳೆ ಅವರು ಕಾಲು ಸಂಕ ತುರ್ತಾಗಿ ಆಗಬೇಕು ಎನ್ನುವ ಬಗ್ಗೆ ಜಿಲ್ಲಾ ಪಂಚಾಯತಿಗೆ ಕೋರಿಕೊಂಡಾಗ ನರೇಗಾದಡಿ ಸಾಧ್ಯವಿಲ್ಲ ಎಂದಿದ್ದಾರೆ. ಇದು ನಮ್ಮಲ್ಲಿ ವ್ಯವಸ್ಥೆ ಹೇಗಿದೆ ಎಂಬುದನ್ನು ತೋರಿಸುತ್ತದೆ. ಒಂದು ವರ್ಷ ಅವಕಾಶ ನೀಡಿ ಇನ್ನೊಂದು ವರ್ಷ ಅವಕಾಶ ನೀಡದೇ ಇದ್ದರೆ ಹೇಗೆ? ಈ ರೀತಿಯ ತಾರತಮ್ಯಗಳನ್ನು ಸರ್ಕಾರ ಮಾಡಬಾರದು. ಕಾಲು ಸಂಕ ಇಲ್ಲದೇ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳ ಜವಾಬ್ದಾರಿಯನ್ನು ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹೊರಲಿದೆಯೇ ಎಂದು ಪ್ರಶ್ನಿಸಿದ್ದಾರೆ.

246 ಕಾಲು ಸಂಕ
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ ಮೂಲಕ ಮಾಡಿದ ಸರ್ವೇಯಲ್ಲಿ ಸುಮಾರು 1, ಮಂದಿ ಅದರಲ್ಲಿ 983 ಮಕ್ಕಳು ಕಾಲು ಸಂಕ ಬಳಸುತ್ತಿರುವುದು ಕಂಡು ಬಂದಿತ್ತು. ತಾಲೂಕಿನಲ್ಲಿ 246 ಕಾಲು ಸಂಕ ವಿದ್ದು, ಅದರಲ್ಲಿ 71 ತೀರ ಕೆಟ್ಟ ಸ್ಥಿತಿಯಲ್ಲಿದೆ. ಅವುಗಳ ದುರಸ್ತಿ ಅಥವಾ ಪುನರ್ ನಿರ್ಮಾಣ ಆಗಬೇಕಾಗಿದೆ. ಇದರ ಜತೆಗೆ ಸುಮಾರು ಕಡೆಗಳಲ್ಲಿ ಹೊಸದಾಗಿ ಕಾಲು ಸಂಕ ಆಗಬೇಕು. ನರೇಗಾದಡಿ 5 ಲಕ್ಷದ ವರೆಗಿನ ಕಾಮಗಾರಿ ಮಾಡಲು ಅವಕಾಶ ಇರುವುದರಿಂದ ತಕ್ಷಣವೇ ಕಾಲುಸಂಕಗಳ ನಿರ್ಮಾಣಕ್ಕೆ ಅನುಮತಿ ಕೊಡಬೇಕು ಎಂದು ಶಾಸಕರಾದ ಗುರುರಾಜ ಗಂಟಿಹೊಳೆ ಆಗ್ರಹಿಸಿದ್ದಾರೆ.ಶಾಸಕರ ಸ್ವಪ್ರಯತ್ನ
ತಾಲೂಕಿನಲ್ಲಿ ಕಾಲುಸಂಕಗಳ ತುರ್ತು ಅಗತ್ಯತೆ ಮನಗಂಡು ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ನಡುವೆ ಒಡಂಬಡಿಕೆ ಮಾಡಿಕೊಂಡು ವಂಡ್ಸೆ, ಯಡಮೊಗೆ ಭಾಗದಲ್ಲಿ ವಿನೂತನ ತಂತ್ರಜ್ಞಾನ ಬಳಸಿ ಕಾಲು ಸಂಕ‌ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಸಹಭಾಗಿತ್ವದಲ್ಲಿ ಇಷ್ಟು ವೇಗವಾಗಿ ಕಾರ್ಯ ಸಾಗುತ್ತಿರುವಾಗ ಸರ್ಕಾರ ಇದ್ದ ವ್ಯವಸ್ಥೆಗಳನ್ನು ಮೊಟಕುಗೊಳಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ

   

Related Articles

error: Content is protected !!