ಬೈಂದೂರು : ಶಂಕರನಾರಾಯಣ ಭಾಗದ ಉದಯ್ ಆಚಾರ್ಯ ಎಂಬವರು ಅನಾರೋಗ್ಯ ನಿಮಿತ್ತ ಕುಂದಾಪ್ರದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆವಿತ್ತು. ಬ್ಲಡ್ ಬ್ಯಾಂಕ್ಗಳಲ್ಲಿ ವಿಚಾರಿಸಿದಾಗ, ರಕ್ತ ಸಿಗಲಿಲ್ಲ. ಬ್ಲಡ್ ಬ್ಯಾಂಕಿನವರು ಅನೇಕ ಪ್ರಯತ್ನ ಮಾಡಿದರು. ಆದರೆ ಇಲ್ಲಿ ಎಮರ್ಜೆನ್ಸಿ ರಕ್ತದ ಅವಶ್ಯಕತೆ ಇದ್ದಿತ್ತು. ನಮ್ಮ ಸಂಪರ್ಕಗಳನ್ನು ಬಳಸಿ ಪ್ರಯತ್ನಿಸಿದಾಗಲು ರಕ್ತ ದೊರಕಲಿಲ್ಲ.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೇ ಖುದ್ದಾಗಿ ರಾತ್ರಿಗೆ ಕುಂದಾಪ್ರ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ರಕ್ತ ನೀಡಿದರು.
ಅನಾರೋಗ್ಯ ಪೀಡಿತ ನಮ್ಮ ಕಾರ್ಯಕರ್ತ ಶೀಘ್ರವಾಗಿ ಗುಣಮುಖರಾಗಲಿ ಎಂಬುದು ತಾಯಿ ಮೂಕಾಂಬಿಕೆಯಲ್ಲಿ ಪ್ರಾರ್ಥನೆ. ಜೊತೆಗೆ ಬ್ಲಡ್ ಬ್ಯಾಂಕಲ್ಲಿ ರಕ್ತವಿಲ್ಲವಂತೆ ಹೆಚ್ಚಿನ ಸಂಖ್ಯೆಯಲ್ಲಿ ನೀವೆಲ್ಲರು ರಕ್ತದಾನ ಮಾಡಿ, ರಕ್ತವನ್ನು ಶೇಖರಿಸಿ ಇಡುವಲ್ಲಿ ಸಹಕರಿಸಿ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ಗಂಟಿಹೊಳೆ ವಿನಂತಿಸಿದ್ದಾರೆ