Home » ಮೇಲ್ಮನೆಗೆ ಸಿ ಟಿ ರವಿ
 

ಮೇಲ್ಮನೆಗೆ ಸಿ ಟಿ ರವಿ

by Kundapur Xpress
Spread the love

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಪ್ರಮುಖ ಪ್ರತಿಪಕ್ಷ ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮಾಜಿ ಸಚಿವ

ಸಿ ಟಿ ರವಿ ಹಾಲಿ ಪರಿಷತ್ತಿನ ಪ್ರತಿ ಪಕ್ಷದ ಮುಖ್ಯ ಸಚೇತಕ ರವಿ ಕುಮಾರ್ ಹಾಗೂ ಮಾಜಿ ಶಾಸಕ ಎಂ.ಜಿ.ಮುಳಿ ಅವರು ಅಭ್ಯರ್ಥಿಗಳಾಗಿದ್ದು, ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಮಧ್ಯಾಹ್ನ 12.30ಕ್ಕೆ ತಮ್ಮ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.

ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಆದ್ಯತೆ ನೀಡಬೇಕು ಎಂಬ ಪಕ್ಷದ ಹಿರಿಯ ನಾಯಕರ ಒತ್ತಾಯಕ್ಕೆ ಮನ್ನಣೆ ಸಿಕ್ಕಿದ್ದು, ಮೂವರು ಅಭ್ಯರ್ಥಿಗಳ ಪೈಕಿ ರವಿಕುಮಾರ್‌ ಮತ್ತು ಮುಳೆ ಇಬ್ಬರೂ ಒಬಿಸಿಗೆ ಸೇರಿದವರಾಗಿದ್ದಾರೆ. ರವಿಕುಮಾ‌ರ್ ಅವರು ಹಾಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕರಾಗಿದ್ದು, ಅವರ ಕಾರ್ಯವೈಖರಿ ಆಧರಿಸಿ ಎರಡನೇ ಬಾರಿ ಅವಕಾಶ ನೀಡಲಾಗಿದೆ

   

Related Articles

error: Content is protected !!