ಕುಂದಾಪುರ : ನೈರುತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ! ಧನಂಜಯ ಸರ್ಜಿ ಮತ್ತು ಎನ್.ಡಿ.ಎ. ಅಭ್ಯರ್ಥಿ ಎಸ್. ಎಲ್. ಭೋಜೇಗೌಡ ಪರವಾಗಿ ಕುಂದಾಪುರ ನಗರದ ಮೀನು ಮಾರ್ಕೇಟ್ ಚಿಕ್ಕನ್ಸಾಲ್ ರಸ್ತೆ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ಟ್ಯಾಂಡ್ ಪ್ರದೇಶದಲ್ಲಿ ಪದವೀಧರ ಮತ್ತು ಶಿಕ್ಷಕ ಮತದಾರರನ್ನು ಮನೆ ಮನೆ ಭೇಟಿ ಮೂಲಕ ಸಂಪರ್ಕಿಸಿ ಮತ ಯಾಚಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಸೌರಭಿ ಪೈ , ಬಿಜೆಪಿಯ ಹಿರಿಯ ನಾಯಕಿ ಗೀತಾ ಹೆಗ್ಡೆ , ದೀಪ ಅನಿಲ್ ಹಾಗೂ ಫಿಶ್ ಮಾರ್ಕೇಟ್ ಉಪವಸತಿಯ ಕಾರ್ಯದರ್ಶಿ ಅನಿಲ್ ಕುಮಾರ್ ಯು ಕೆ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು