Home » 7. ದುರಹಂಕಾರವೆಂಬ ಶತ್ರು
 

7. ದುರಹಂಕಾರವೆಂಬ ಶತ್ರು

by Kundapur Xpress
Spread the love

ದುರಹಂಕಾರವೆಂಬ ಶತ್ರು

ನಮ್ಮೊಳಗಿನ ಅಹಂಭಾವವನ್ನೇ ನಾವು ಅನೇಕ ಬಾರಿ ಆತ್ಮವಿಶ್ವಾಸವೆಂದು ತಪ್ಪಾಗಿ ತಿಳಿಯುವುದುಂಟು. ಆದರೆ ಇದು ನಿಜವಾದ ಆತ್ಮವಿಶ್ವಾಸವಲ್ಲ. ಇಂಗ್ಲೀಷಿನಲ್ಲಿ ಅದನ್ನು ಓವರ್ ಕಾನ್‍ಫಿಡೆನ್ಸ್ ಎನ್ನುವುದುಂಟು. ಅಹಂಭಾವದಿಂದ ಕೂಡಿದ ವಿಶ್ವಾಸದಲ್ಲಿ ನಮ್ಮ ಹೆಚ್ಚುಗಾರಿಕೆ, ಶಕ್ತಿ-ಸಾಮಥ್ರ್ಯ, ಬುದ್ಧಿವಂತಿಕೆಯ ಬಗ್ಗೆ ನಮಗೆ ಅತಿಯಾದ ಅಹಂಕಾರವೇ ತುಂಬಿರುವುದರಿಂದ ಸ್ವಪ್ರತಿಷ್ಠಯೇ ಅದರಲ್ಲಿ ಅಡಗಿರುತ್ತದೆ. ಹಾಗಾಗಿ ಉದ್ದೇಶಿತ ಕಾರ್ಯದಲ್ಲಿ ಸೋಲುಂಟಾದಾಗ ಭಯಂಕರವಾದ ಹತಾಶೆ, ಜುಗುಪ್ಸೆ, ದುಃಖ ಕಾಡುವುದು ಸಹಜ. ಈ ಸೋಲನ್ನು ಎದುರಿಸುವ ಮನೋಬಲವನ್ನೂ ದುರಹಂಕಾರವೆಂಬ ಶತ್ರುವು ನಾಶಮಾಡಿರುತ್ತದೆ. ಕೆಲವೊಂದು ವಿಪರೀತ ಸಂದರ್ಭಗಳಲ್ಲಿ ಮನೋಬಲವನ್ನು ಕಳೆದುಕೊಂಡ ವ್ಯಕ್ತಿ ಕ್ಷಣಮಾತ್ರ ನಿರ್ಧಾರ ಕೈಗೊಂಡು ಆತ್ಮಹತ್ಯೆಗೂ ಮುಂದಾಗುತ್ತಾನೆ. ಇದೆಂತಹ ಘೋರ ದುರಂತ? ಸ್ವಪ್ರತಿಷ್ಠೆಯ ದುರಹಂಕಾರವನ್ನು ಗೆಲ್ಲಲು ಸಾಧ್ಯವಿಲ್ಲವೆ? ಗೀತೆಯಲ್ಲಿ ಕೃಷ್ಣ ಅರ್ಜುನನನ್ನು ಹೀಗೆ ಎಚ್ಚರಿಸುತ್ತಾನೆ. ಸಿದ್ಧಿ-ಅಸಿದ್ಧಿಗಳಲ್ಲಿ ನೀನು ಸಮಾನ ಬುದ್ಧಿಯುಳ್ಳವನಾಗಬೇಕಿದ್ದರೆ ನಿನ್ನ ಯಾವತ್ತೂ ಕರ್ಮಗಳಲ್ಲಿ ನೀನೇ ಕರ್ತೃವೆಂಬ ಭಾವವನ್ನು ಹೊಂದದಿರು. ಸಮತ್ವದ ಭಾವವೆಂಬ ಯೋಗದಲ್ಲಿ ನಿನ್ನನ್ನು ಸ್ಥಿರಗೊಳಿಸಿಯೇ ಕರ್ಮಗಳನ್ನು ಮಾಡು. ಆಗ ಸೋಲು ಗೆಲುವುಗಳು ನಿನ್ನಲ್ಲಿ ಭಾವವಿಕಾರವನ್ನು ಉಂಟು ಮಾಡಲಾರವು. ದುರಂಕಾರವೆಂಬ ಶತ್ರು ನಿನ್ನ ಬಳಿ ಸುಳಿಯದು.

   

Related Articles

error: Content is protected !!