Home » ಬಿ. ಬಿ. ಹೆಗ್ಡೆ ಕಾಲೇಜು : ಅರಿವು  ಕಾರ್ಯಕ್ರಮ
 

ಬಿ. ಬಿ. ಹೆಗ್ಡೆ ಕಾಲೇಜು : ಅರಿವು  ಕಾರ್ಯಕ್ರಮ

by Kundapur Xpress
Spread the love

ಕುಂದಾಪುರ : ಲೈಂಗಿಕ ದೌರ್ಜನ್ಯ ಯಾವ ಬಗೆಯಲ್ಲಾಗುತ್ತದೆ,  ಅತ್ಯಾಚಾರವಾದ ಸಂದರ್ಭದಲ್ಲಿ ಕಾನೂನು ನೆರವನ್ನು ಹೇಗೆ ಪಡೆಯಬಹುದು, ಈ ವಿಚಾರಗಳಲ್ಲಿರುವ ಕಾನೂನುಗಳು ಯಾವುವು ಮತ್ತು ಈ ಕಾನೂನುಗಳು ಹೇಗೆ ಕಾರ್ಯನಿರ್ವಹಿಸುತ್ತವೆ,  ಅದರಿಂದ ಹೇಗೆ ನ್ಯಾಯ ಒದಗಿಸಲು ಸಾಧ್ಯ ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಕಾನೂನಿನ ಅರಿವನ್ನು ಪಡೆಯಬೇಕಾಗಿರುವುದು ಅವಶ್ಯ ಎಂದು ಕುಂದಾಪುರ ಹಿರಿಯ ನ್ಯಾಯವಾದಿ ಶ್ಯಾಮಲಾ ಭಂಡಾರಿ ಹೇಳಿದರು.

ಇವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಘಟಕ ಹಾಗೂ ರ‍್ಯಾಗಿಂಗ್ ತಡೆ ಫಟಕಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ “ಅರಿವು”ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕಿ ನಂದಾ ರೈ ಸ್ವಾಗತಿಸಿ, ಪ್ರೀತಿ ಹೆಗ್ಡೆ ಅತಿಥಿಯನ್ನು ಪರಿಚಯಿಸಿದರು. ಕಾರ್ಯಕ್ರಮದ  ಸಂಯೋಜಕಿ ವಿಲ್ಮಾ ಡಿಸೋಜಾ ವಂದಿಸಿದರು. ವಿದ್ಯಾರ್ಥಿನಿ ಶೃದ್ಧಾ ನಿರೂಪಿಸಿದರು. ಇದೇ ಸಂದರ್ಭ ಸಿ.ಎ. ಮತ್ತು ಸಿ.ಎಸ್. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

   

Related Articles

error: Content is protected !!