ಕೋಟ: ವಲಯದ ಏಕೈಕ ಬಾಲಕಿಯರ ಪ್ರೌಢಶಾಲೆಯಾಗಿರುವ, ಸದಾ ಹೊಸತನದ ಪ್ರಯೋಗಶೀಲವಾಗಿರುವ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇಲ್ಲಿ ಇ.ವಿ.ಎಂ ಆ್ಯಪ್ ಬಳಸಿ ಶಾಲಾ ಸಂಸತ್ತಿನ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಮತ್ತು ಮತದಾನದ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಾಗಿ ತಿಳಿಸಲು ಇ.ವಿ.ಎಂ. ಬಳಸಲಾಯಿತು. ವಿದ್ಯಾರ್ಥಿಗಳು ಸಂತೋಷದಿಂದ ಬ್ಯಾಲೆಟ್ ಯುನಿಟ್ನಲ್ಲಿ ಮತ ಚಲಾಯಿಸಿದರು. ತಮ್ಮ ಅಭ್ಯರ್ಥಿಯ ಮುಂದೆ ಬ್ಯಾಲೆಟ್ ಒತ್ತಿದಾಗ ಬೀಪ್ ಸೌಂಡ್ ಹಾಗೂ ತಮ್ಮ ಅಭ್ಯರ್ಥಿಯ ಹೆಸರು,ಪೆÇೀಟೋ ಕಾಣಿಸಿದಾಗ ತಮ್ಮ ಅಭ್ಯರ್ಥಿಗೆ ಮತ ಬಿದ್ದಿರುವುದನ್ನು ಖಾತರಿಪಡಿಸಿಕೊಂಡರು
ಈ ವಿನೂತನವಾದ ಪ್ರಯೋಗದ ಮೂಲಕ ವಿದ್ಯಾರ್ಥಿಗಳು ಚುನಾವಣಾ ಪ್ರಕ್ರಿಯೆಯ ಅನುಭವ ಪಡೆದರು. ವಿದ್ಯಾರ್ಥಿ ನಾಯಕಿಯ ಸ್ಥಾನಕ್ಕೆ ಎರಡು ವಿದ್ಯಾರ್ಥಿಗಳು, ಉಪನಾಯಕಿಯ ಸ್ಥಾನಕ್ಕೆ ಮೂರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಪ್ರಜ್ಞಾ ಉಪನಾಯಕಿಯಾಗಿ ಸಾನ್ವಿ ಎಮ್ ಆಯ್ಕೆಯಾದರು. ಶಾಲಾ ಮುಖ್ಯಶಿಕ್ಷಕ ಜಗದೀಶ ಹೊಳ್ಳ ಮಾರ್ಗದರ್ಶನ ನೀಡಿದರು. ಸಮಾಜ ವಿಜ್ಞಾನ ಶಿಕ್ಷಕ ನರೇಂದ್ರ ಕುಮಾರ್ ಕೋಟ ಇವರು ಚುನಾವಣಾ ಪ್ರಕ್ರಿಯೆ ಬಗ್ಗೆ ಸಂಘಟಿಸಿದರು.
ಸಹಶಿಕ್ಷಕರಾದ ರಾಧಾಕೃಷ್ಣ ಭಟ್, ಗಣೇಶ್ ಶೆಟ್ಟಿಗಾರ್, ನಾರಾಯಣಮೂರ್ತಿ, ಸುಮಂಗಲ, ಪುಷ್ಪಲತಾ, ಮಮತ, ವಿಜಯಲಕ್ಷ್ಮಿ, ಮಹಾಲಕ್ಷ್ಮಿ, ನಾಗರತ್ನ, ಕುಸುಮ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.