ಇಟಲಿ : ದಕ್ಷಿಣ ಇಟಲಿಯ ಅಪುಲಿಯಾದಲ್ಲಿ ಶುಕ್ರವಾರ ನಡೆದ ಜಿ7 ಶೃಂಗಸಭೆಯ ಔಟ್‌ರೀಚ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇಬ್ಬರು ಹಸ್ತಲಾಘವ ಮಾಡಿ ಆತ್ಮೀಯವಾಗಿ ಅಪ್ಪಿಕೊಂಡರು
ಇದೇ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. 2019ರ ಕೊರೋನಾ ಸಮಯ,ಕೋವಿಡ್ ಲಸಿಕೆಯಲ್ಲಿ ಭಾರತದ ನಡೆ, ಹವಾಮಾನ ಬದಲಾವಣೆ ನಿಯಂತ್ರಿಸಲು ಭಾರತ ಕೈಗೊಂಡ ಪಾತ್ರದ ಕುರಿತು ಮೋದಿ ಪೋಪ್ ಬಳಿ ಚರ್ಚಿಸಿದರು. ಭಾರತಕ್ಕೆ ಬರುವಂತೆ ಕೂಡ ಪೋಪ್ ಫ್ರಾನ್ಸಿಸ್‌ರನ್ನು ಆಹ್ವಾನಿಸಿದರು. ಆಗ ಮೋದಿ ಆಹ್ವಾನಕ್ಕೆ ಪೋಪ್ ಸಂತಸ ವ್ಯಕ್ತಪಡಿಸಿದರು.