Home » ವಿಶ್ವ ಪರಿಸರ ದಿನಾಚರಣೆ
 

ವಿಶ್ವ ಪರಿಸರ ದಿನಾಚರಣೆ

by Kundapur Xpress
Spread the love

ಗಿಡದ ಮಹತ್ವ ಅರಿತು ಅದರ ನಿರ್ವಹಣೆ ಮಾಡಿ

-ಮಧುಸೂದನ್ ಹೇರೂರು
ಕೋಟ : ಗಿಡ ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸಿ ಅದರ ಮಹತ್ವ ಅರಿಯಬೇಕಾದದ್ದು ಪ್ರತಿಯೊಬ್ಬರ  ಆದ್ಯ ಕರ್ತವ್ಯವಾಗಿದೆ ಎಂದು ಪರಿಸರಪ್ರೇಮ ಜಯಂಟ್ಸ್ ಗ್ರೂಪ್ಸ್ ಬ್ರಹ್ಮಾವರ ಇದರ ಪೂರ್ವಾಧ್ಯಕ್ಷ ಮಧುಸೂದನ್ ಹೇರೂರು ಹೇಳಿದರು.
ಭಾನುವಾರ ಹರ್ತಟ್ಟು ನವೋದಯ ಫ್ರೆಂಡ್ಸ್ ,ಜಯಂಟ್ಸ್ ಗ್ರೂಪ್ ಬ್ರಹ್ಮಾವರ,ಭಾರತೀಯ ಜನೌಷಧ ಕೇಂದ್ರ ಬ್ರಹ್ಮಾವರ ತೆಕ್ಕಟ್ಟೆ ನೇತೃತ್ವದಲ್ಲಿ ಕೋಟ ಪಂಚವರ್ಣ ಯುವಕ ಮಂಡಲ,ಅದರ ಮಹಿಳಾ ಮಂಡಲ ಕೋಟ ,ಕ್ಯಾದ್ರಕೆರೆ ಅಜ್ಜಯ್ಯ ಪರಿವಾರ ದೈವಸ್ಥಾನ ಹರ್ತಟ್ಟು,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ಹರ್ತಟ್ಟು ಅಜ್ಜಯ್ಯ ದೈವಸ್ಥಾನದ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಗಿಡದಲ್ಲಿ ಸಾಕಷ್ಟು ಆರೋಗ್ಯ ಸಂಬಂಧಿಸಿದ ವಿಚಾರಗಳಿವೆ,ಅಥವಾ ಧಾರ್ಮಿಕವಾಗಿ ,ವೈಜ್ಞಾನಿಕವಾಗಿ ಮನುಷ್ಯನಿಗೆ ಅಗತ್ಯಕ್ಕೆ ಅನುಗುಣವಾಗಿ ಬೇಕಾದ ಅಂಶಗಳಿವೆ ಆದರೆ ಪ್ರಸ್ತುತ ಅದರ ಬಗ್ಗೆ ಯಾರೂ ಕೂಡಾ ಗಮನ ಹರಿಸದ ಬಗ್ಗೆ ಖೇಧ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಿಸದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ ಈ ದಿಸೆಯಲ್ಲಿ ಪ್ರತಿಯೊಬ್ಬರೂ ಗಿಡನೆಟ್ಟು ಪೂಷಿಸುವ ಕಾರ್ಯ ಮಾಡಲಿ ಎಂದು ಹಾರೈಸಿದರು.
ಇದೇ ವೇಳೆ ಮನ್ನೂರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪರಿಸರ ಕಾಳಜಿ ಕಾರ್ಯಕ್ಕಾಗಿ ಮಧುಸೂದನ್ ಹೇರೂರು ಹಾಗೂ ಸ್ಥಳೀಯ ಪರಿಸರಪ್ರೇಮಿ ಶಿವರಾಮ ಶೆಟ್ಟಿ,ದಿನಕರ ಶೆಟ್ಟಿ ನಡುಬೆಟ್ಟು ಇವರುಗಳನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ನವೋದಯ ಫ್ರೆಂಡ್ಸ್ ಹರ್ತಟ್ಟು ಅಧ್ಯಕ್ಷ ಪ್ರಕಾಶ್ ಆಚಾರ್ ವಹಿಸಿದ್ದರು. ಸಭೆಯಲ್ಲಿ ಜಯಂಟ್ಸ್ ಗ್ರೂಪ್ಸ್ ಬ್ರಹ್ಮಾವರದ ಅಧ್ಯಕ್ಷ ಸುಂದರ್ ಪೂಜಾರಿ,ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ವಿವೇಕ ವಿದ್ಯಾಸಂಸ್ಥೆ ಉಪನ್ಯಾಸಕ ಸದಾಶಿವ ಹೊಳ್ಳ,ವೈದ್ಯಕೀಯ ಪ್ರತಿನಿಧಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಕಾರಂತ್,ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯ ಅಜಿತ್ ದೇವಾಡಿಗ,ಕ್ಯಾದ್ರಕೆರೆ ಅಜ್ಜಯ್ಯ ಪರಿವಾರ ದೈವಸ್ಥಾನ ಅರ್ಚಕ ಬಸವ,ದೈವಸ್ಥಾನದ ಆಡಳಿತ ಮಂಡಳಿಯ ಚಂದ್ರ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ನವೋದಯ ಫ್ರೆಂಡ್ಸ್ ಸದಸ್ಯರಾದ ಭರತ್ ಕೋಟ,ಚಂದ್ರ,ಕಿರಣ್ ಕುಮಾರ್,ನವೀನ್ ಆಚಾರ್ ಪ್ರವೀಣ್,ರಾಘವೇಂದ್ರ ,ಮಂಜುನಾಥ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು. ಸನ್ಮಾನಿತರ ಪರಿಚಯಪತ್ರವನ್ನು ಪತ್ರಕರ್ತ ರವೀಂದ್ರ ಕೋಟ ವಾಚಿಸಿದರು.ಕಾರ್ಯಕ್ರಮವನ್ನು ನವೋದಯ ಫ್ರೆಂಡ್ಸ್ ಸದಸ್ಯ ಕೀರ್ತಿಶ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಕಾರ್ಯಕ್ರಮವನ್ನು ನವೋದಯ ಫ್ರೆಂಡ್ಸ್ ಪೂರ್ವಾಧ್ಯಕ್ಷ ಶ್ರೀನಾಥ ಕೋಟ ಸಂಯೋಜಿಸಿದರು.

   

Related Articles

error: Content is protected !!