Home » ಸ್ನೇಹ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
 

ಸ್ನೇಹ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

by Kundapur Xpress
Spread the love

ಕೋಟ: ಪಾಂಡೇಶ್ವರ ಗ್ರಾಮಪಂಚಾಯತ್ ಸ್ನೇಹ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು  ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿಸ್ನೇಹ ಸಂಜೀವಿನಿ ಒಕ್ಕೂಟ ಅಧ್ಯಕ್ಷರಾಗಿ ಲೀಲಾವತಿ ಗಂಗಾಧರ್ ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿಯಾಗಿ ಸುಷ್ಮಾ ರಾಜ್, ಕೋಶಾಧಿಕಾರಿಯಾಗಿ ಲವೀನಾ, ಉಪಾಧ್ಯಕ್ಷರಾಗಿ ಹಿಲ್ದಾ ಅಲ್ಮೆಡ, ಜೊತೆ ಕಾರ್ಯದರ್ಶಿಯಾಗಿ ಪ್ರೇಮ ಇವರು ಆಯ್ಕೆಯಾದರು. ವಾರ್ಷಿಕ ಸಭೆಯಲ್ಲಿ ಎಂಬಿಕೆ ಉಷಾ ಗಣೇಶ್ ಪೂಜಾರಿ ವಾರ್ಷಿಕ ಜಮಾ ಖರ್ಚು ಮಂಡಿಸಿದರು. ಕಾರ್ಯದರ್ಶಿ ಕವಿತಾ ವಾರ್ಷಿಕ ವರದಿ ಮಂಡಿಸಿದರು.ಇದನ್ನು ಸದಸ್ಯರು ಅನುಮೋದನೆ ಮಾಡಲಾಯಿತು.
ಒಕ್ಕೂಟ ಎನ್‍ಎಲ್‍ಆರ್‍ಎಂ ತಾಲೂಕು ವ್ಯವಸ್ಥಾಪಕ ಪ್ರಶಾಂತ್ ಉದ್ಯೋಗ, ಉತ್ತಮ ಮಾದರಿ ಒಕ್ಕೂಟ ಆಗಲು ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎನ್ನುವ ಬಗ್ಗೆ ತಿಳಿಸಿದರು.ಯೂನಿಯನ್ ಬ್ಯಾಂಕ್ ಸಾಸ್ತಾನ ಮ್ಯಾನೇಜರ್ ಶ್ರುತಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸದಸ್ಯರಿಗೆ ಬ್ಯಾಂಕ್‍ನಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಪಂಚಾಯತ್ ಅಧ್ಯಕ್ಷೆ ಸುಶೀಲ ಪೂಜಾರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಕ್ಷಿ, ಪಂಚಾಯತ್ ಉಪಾಧ್ಯಕ್ಷ ವೈ.ಬಿ ರಾಘವೇಂದ್ರ,ಪಂಚಾಯತ್ ಸದಸ್ಯರು , ಒಕ್ಕೂಟ ಎಲ್‍ಸಿಆರ್‍ಪಿ, ಕೃಷಿ, ಪಶು, ಕೃಷಿ ಉದ್ಯೋಗ ಸಖಿ, ಒಕ್ಕೂಟದ ಪದಾಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು,ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು,ಪಂಚಾಯತ್ ಸದಸ್ಯರು, ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.

   

Related Articles

error: Content is protected !!