Home » 11. ನಿಜವಾದ ತ್ಯಾಗ
 

11. ನಿಜವಾದ ತ್ಯಾಗ

by Kundapur Xpress
Spread the love
  1. ನಿಜವಾದ ತ್ಯಾಗ

ಮನಸ್ಸಿನ ಏಕಾಗ್ರತೆ ಮತ್ತು ಸ್ಥಿರತೆಯನ್ನು ಸಾಧಿಸುವುದು ಅಷ್ಟು ಸುಲಭವೇ? ಸುಲಭವೆಂದು ಭಾವಿಸಿದರೆ ಸುಲಭ, ಕಷ್ಟವೆಂದು ಭಯಪಟ್ಟರೆ ಕಷ್ಟ. ಒಟ್ಟಿನಲ್ಲಿ ಒಂದು ಮಾತಂತೂ ಸತ್ಯ. ಯಾವಾಗ ನಮಗೆ ಮನಸ್ಸಿನಲ್ಲಿ ಸಾಗರದಲೆಗಳಂತೆ ನಿರಂತರವಾಗಿ ಮುನ್ನುಗ್ಗಿ ಬರುವ ಆಸೆಗಳನ್ನು ಮಾರ್ಗ ಮಧ್ಯೆಯೇ ತಡೆದು ಹೊಸಕಿ ಹಾಕಲು ಸಾಧ್ಯವಾಗುವುದೋ ಆಗ ಮಾತ್ರವೇ ಮನಸ್ಸಿನ ಏಕಾಗ್ರತೆಯ ದಾರಿ ಸುಗಮವಗುವುದೋ ಆಗ ಮಾತ್ರವೇ ಮನಸ್ಸಿನ ಏಕಾಗ್ರತೆಯ ದಾರಿ ಸುಗಮವಾಗುವುದು. ನಿಜಕ್ಕಾದರೆ ತನ್ನೊಳಗೆ ಹುದುಗಿರುವ ಆಸೆ ಆಕಾಂಕ್ಷೆಗಳನ್ನು, ಕಾಮನೆಗಳನ್ನು ತ್ಯಜಿಸಲು ಸಾಧ್ಯವಾದರೆ ಮಾತ್ರವೇ ಉಳಿದೆಲ್ಲವನ್ನೂ ತ್ಯಾಗ ಮಾಡುವುದು ಕಷ್ಟದ ಮಾತಲ್ಲ. ಆದರೆ ಸಾಮಾನ್ಯವಾಗಿ ದೈನಂದಿನ ಬದುಕಿನಲ್ಲಿ ತ್ಯಾಗಶೀಲರಾಗುವುದೆಂದರೆ ಇರುವ ಸಿರಿ-ಸಂಪತ್ತು, ಲೌಕಿಕ ಸಾಧನಗಳನ್ನು ಇಲ್ಲದವರಿಗೆ ಕೊಡುವುದೇ ಆಗಿದೆ. ಆದರೆ ಸ್ವತಃ ಮನಸ್ಸಿನೊಳಗೆ ಆಸೆ-ಆಕಾಂಕ್ಷೆಗಳನ್ನು ತ್ಯಜಿಸದಿದ್ದರೆ ಬೇರೆ ಯಾವುದನ್ನು ಆತ ತ್ಯಾಗಮಾಡಿದರೂ ನಿಜವಾಗಿ ತ್ಯಾಗಮಾಡಿದಂತೆ ಆಗುವುದಿಲ್ಲ. ಮನಸ್ಸಿನಲ್ಲಿರುವ ಆಸೆ-ಆಕಾಂಕ್ಷೆಗಳನ್ನು ತ್ಯಜಿಸುವಾತನಿಗೆ ಆತ್ಮನಿಂದಲೇ ಆತ್ಮನಲ್ಲಿ ಸಂತುಷ್ಟಿಯನ್ನು ಪಡೆಯಲು ಸಾಧ್ಯವಾಗಿ ಸ್ಥಿರ ಬುದ್ಧಿಯನ್ನು ಹೊಂದುವುದು ಸುಲಭವಾಗುತ್ತದೆ. ಅಂತಹವನಲ್ಲಿ ದುಃಖ ಉಂಟಾದಾಗ ಮನಸ್ಸು ಉದ್ವೇಗಗೊಳ್ಳುವುದಿಲ್ಲ. ಸುಖ ಉಂಟಾದಾಗ ಅದರಲ್ಲಿ ಅಭಿಲಾಷೆಯೂ ಮೂಡುವುದಿಲ್ಲ. ಭಯ-ಕ್ರೋಧಗಳೂ ಅವನ ಬಳಿ ಸುಳಿಯುವುದಿಲ್ಲ.

   

Related Articles

error: Content is protected !!