ಬೆಂಗಳೂರು : ಸರ್ಕಾರದ ಆದೇಶದಂತೆ 2019ರ ಏಪ್ರಿಲ್ಗಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಕೆ ಗಡುವನ್ನು ಸೆ.15ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಲಾಗಿತ್ತು. ಆದರೂ, ಬಹುತೇಕ ವಾಹನ ಮಾಲೀಕರು ಎಚ್ ಎಸ್ಆರ್ಪಿ ಅಳವಡಿಸಿರಲಿಲ್ಲ. ಸಾರಿಗೆ ಇಲಾಖೆ ಅಂದಾಜಿನ ಪ್ರಕಾರ ಎರಡು ಕೋಟಿ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಳ್ಳಬೇಕು ಆದರೆ ಈವರೆಗೆ 45 ಲಕ್ಷ ವಾಹನಗಳು ಮಾತ್ರ ಎಚ್ಎಸ್ ಆರ್ಪಿ ಅಳವಡಿಸಿಕೊಂಡಿವೆ. ಉಳಿದ ವಾಹನ ಮಾಲೀಕರು ಎಚ್ಎಸ್ಆರ್ಪಿ ಅಳವಡಿಕೆಗೆ ನಿರ್ಲಕ್ಷ್ಯ ತೋರಿದ್ದಾರೆ.
ಈ ನಡುವೆಯೇ ಎಚ್ಎಸ್ಆರ್ಪಿ ಕುರಿತು ಪ್ರಕರಣವೊಂದರಲ್ಲಿ ಜುಲೈ 4ರವರೆಗೆ ಎಚ್ಎಸ್ಆರ್ಪಿ ಅಳವಡಿಸದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದ ಹೈಕೋರ್ಟ್ ಅಳವಡಿಕೆ ಗಡುವು ವಿಸ್ತರಿಸಲು ಅವಕಾಶ ನೀಡಿತ್ತು. ಇದೀಗ ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ಸರ್ಕಾರ ಗಡುವನ್ನು ಸೆ. 15ರವರೆಗೆ ವಿಸ್ತರಿಸಿದೆ.