Home » ಎದೆಹಾಲು ಕುಡಿದ ಹಸುಳೆ ಮೃತ್ಯು
 

ಎದೆಹಾಲು ಕುಡಿದ ಹಸುಳೆ ಮೃತ್ಯು

by Kundapur Xpress
Spread the love

ಗಂಗೊಳ್ಳಿ : ತಾಯಿಯ ಎದೆ ಹಾಲು ಕುಡಿದ 43 ದಿನದ ಹಸುಳೆಯೊಂದು ಮೃತಪಟ್ಟ ಘಟನೆ ಗಂಗೊಳ್ಳಿಯ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದಲ್ಲಿ ನಡೆದಿದೆ

ಜೂನ್‌ 18ನೇ ತಾರೀಕಿನಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನೇತ್ರಾವತಿ ಎಂಬವರು ತನ್ನ ಮಗು ಶಾನ್ಯಾಳಿಗೆ ಎದೆ ಹಾಲು ಕುಡಿಸಿ ಕೊಠಡಿಯಲ್ಲಿ ಮಲಗಿಸಿ ಹೊರಗೆ ಬಂದಿದ್ದರು.ಸ್ವಲ್ಪ ಸಮಯದ ಬಳಿಕ ನೇತ್ರಾವತಿಯವರ ತಂದೆ ಲಕ್ಷ್ಮಣ ಅವರು ಮಗುವನ್ನು ನೋಡಲು ಕೊಠಡಿಯ ಒಳಗೆ ಹೋದಾಗ ಮಗು ಉಸಿರಾಡದೇ, ಮೈ ತಣ್ಣಗಾಗಿರುವುದು ಕಂಡು ಬಂದಿತ್ತು. ಮುಟ್ಟಿದಾಗಲೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ ಕೂಡಲೇ’ ಮಗುವನ್ಕು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

   

Related Articles

error: Content is protected !!