ಕುಂದಾಪುರ : ಮೂಡ್ಲಕಟ್ಟೆ ಕಾಲೇಜ್ ಆಫ್ ಯೋಗ ಮತ್ತು ಆಧ್ಯಾತ್ಮಿಕ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಮುಖ್ಯ ಅತಿಥಿ ಹಾಗೂ ತರಬೇತುದಾರರಾಗಿ ಪಂಚಕರ್ಮ ಕ್ಲಿನಿಕ್ ಮತ್ತು ಆಯುರ್ವೇದ ಮೆಡಿಸಿನ್ ಕುಂದಾಪುರ ಇದರ ವೈದ್ಯರಾದ ಡಾಕ್ಟರ್ ವಿಜಯಲಕ್ಷ್ಮಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಾಚೀನ ಭಾರತದ ಯೋಗ ಪರಂಪರೆ ಮತ್ತು ಜಗತ್ತು ಯೋಗವನ್ನು ಅಳವಡಿಸಿಕೊಂಡ ಬಗೆಯನ್ನು ವಿವರಿಸಿದರು. ಯೋಗ ಮತ್ತು ಪ್ರಾಣಾಯಾಮ ದೈನಂದಿನ ಬದುಕಿನಲ್ಲಿ ಹೇಗೆ ಸಹಕರಿಯಾಗಬಹುದು ಎನ್ನುವುದನ್ನು ತಿಳಿಸಿದರು. ತದನಂತರ ವಿವಿಧ ಅಸನವನ್ನು ಪ್ರತ್ಯಕ್ಷಕೆಯ ಮೂಲಕ ಶಿಕ್ಷಕರ ಜೊತೆಗೂಡಿ ಮಾಡಲಾಯಿತು ಹಾಗೂ . ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆಯವರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಐ ಎಂ ಜೆ ಎಸ್ ಸಿ ಪ್ರಾಂಶುಪಾಲರಾದ ಪ್ರತಿಭಾ ಎಂ ಪಾಟೀಲ್ ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ ಕುಮಾರ್ , ಎಂಸಿಎನ್ ಉಪ ಪ್ರಾಂಶುಪಾಲೆಯವರಾದ ಪ್ರೊ. ರೂಪಶ್ರೀ ಮತ್ತು ಯೋಗ ಹಾಗೂ ಅಧ್ಯತ್ಮಿಕ ಸಂಘದ ಸಯೋಜಕರಾದ ಪ್ರವೀಣ್ ಖಾರ್ವಿ ಹಾಗೂ ಎಲ್ಲಾ ಬೋಧಕವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಾಧ್ಯಾಪಕಿಯವರಾದ ಪ್ರೊ. ಅರ್ಚನಾ ಗದ್ದೆ ನಿರೂಪಿಸಿದರು