Home » ಎಕ್ಸಲೆಂಟ್ ಕುಂದಾಪುರ : ವಿಶ್ವ ಯೋಗ ದಿನಾಚರಣೆಯ ಸಂಭ್ರಮ
 

ಎಕ್ಸಲೆಂಟ್ ಕುಂದಾಪುರ : ವಿಶ್ವ ಯೋಗ ದಿನಾಚರಣೆಯ ಸಂಭ್ರಮ

by Kundapur Xpress
Spread the love

ಕುಂದಾಪುರ : 2024-25ನೇ ಸಾಲಿನ ಜೂನ್ 21ರಂದು ವಿಶ್ವಯೋಗ ದಿನಾಚರಣೆಯನ್ನು ಪ್ರಸಿದ್ಧ ಯೋಗ ತರಬೇತುದಾರರ ಸಮ್ಮುಖದೊಂದಿಗೆ ಅದ್ಧೂರಿಯಾಗಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ, ಸುಣ್ಣಾರಿಯಲ್ಲಿ ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ರಾಜ್ಯ ಕಂಡಂತಹ ಶ್ರೇಷ್ಠ ಯೋಗ ತರಬೇತುದಾರರಾದ ಅಟಕೆರೆ ಬಾಬು ಪೈ ಹಾಗೂ ಮಹಿಳಾ ಯೋಗ ತರಬೇತುದಾರರಾದ ರೂಪಾ ಬಾಬು ಪೈ ಯವರು ವಿಶೇಷ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ಹಾಗೂ ಯೋಗದ ಹಲವಾರು ಭಂಗಿಗಳ ಪ್ರಯೋಜನದ ಸಾರವನ್ನು ಹೇಳಿ ತಮ್ಮ ಅನುಭವಗಳನ್ನು ಬಿತ್ತರಿಸಿದರು. ಎಂ ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರು ಮಾತನಾಡಿ ಇಂದಿನ ಮಕ್ಕಳಿಗೆ ಯೋಗದ ಅವಶ್ಯಕತೆಯೇನು ಎಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿಯವರು ಮಾತನಾಡಿ ಸನಾತನ ಕಾಲದಿಂದಲೂ ಆಚರಿಸುವ ಯೋಗದ ಬಗ್ಗೆ ಮನವರಿಕೆ ಮಾಡಿಸಿದರು. ಎಕ್ಸಲೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಸರೋಜಿನಿ ಆಚಾರ್ಯ ಮಾತನಾಡಿ ಸದೃಢ ದೇಹ, ಮನಸ್ಸಿಗೆ ಯೋಗ ಅವಶ್ಯಕತೆ ಆದ್ದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನದ ಸುಂದರ ಮಾತುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಅನುಭವಿ ಯೋಗ ತರಬೇತುದಾರರ ಜೊತೆಗೆ ಯೋಗದ ವಿವಿಧ ಆಸನಗಳನ್ನು ಮಾಡುವ ಮೂಲಕ ಎಕ್ಸಲೆಂಟ್ ವಿದ್ಯಾ ಸಂಸ್ಥೆಯು ವಿಭಿನ್ನ ಭಂಗಿಯ ಯೋಗಾಸನಗಳ ರಸಮಯ ತಾಣವಾಯಿತು. ಈ ಸಂದರ್ಭದಲ್ಲಿ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

   

Related Articles

error: Content is protected !!