ಕೋಟ: ಪ್ರಕೃತಿಯನ್ನು ಆರಾಧಿಸುವ ಕಾರ್ಯ ಭಗವಂತನಿಗೆ ಅತೀ ಹತ್ತಿರವಾದದ್ದು ಈ ನಿಟ್ಟಿನಲ್ಲಿ ಪಂಚವರ್ಣ ಸಂಸ್ಥೆಯ ಪರಿಸರಪ್ರೇಮ ಶ್ಲಾಘನೀಯ ಎಂದು ಪಾಂಡೇಶ್ವರ ಯೋಗಗುರುಕುಲದ ಮುಖ್ಯಸ್ಥ ವಿದ್ವಾನ್ ಡಾ.ವಿಜಯ್ ಮಂಜರ್ ಹೇಳಿದರು.
ಭಾನುವಾರ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಸುವರ್ಣ ಎಂಟರ್ ಪ್ರೆöÊಸಸ್ ಬ್ರಹ್ಮಾವರ ಮಣೂರು ಫ್ರೆಂಡ್ಸ್ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ,ಹಂದಟ್ಟು ಮಹಿಳಾ ಬಳಗ ಕೋಟ,ಸಮುದ್ಯತಾ ಗ್ರೂಪ್ಸ್ ಕೋಟ ಇವರುಗಳ ಸಹಯೋಗದೊಂದಿಗೆ ಪಾಂಡೇಶ್ವರ ಸಹಕಾರಿ ಹಾಲು ಉತ್ಪಾದಕರ ಮಹಿಳಾ ಸಂಘ ಇದರ ಸಂಯೋಜನೆಯೊAದಿಗೆ ೨೧೩ನೇ ಪರಿಸರಸ್ನೇಹಿ ಹಸಿರುಜೀವ ಅಭಿಯಾನದ ಪ್ರಯುಕ್ತ ಹಮ್ಮಿಕೊಂಡ ಗಿಡ ವಿತರಣೆ,ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ ಭಗವಂತ ನಮ್ಮಗೆ ಪರಿಶುದ್ಧವಾದ ಪರಿಸರವನ್ನು ನೀಡಿದ್ದಾನೆ ಆದರೆ ಅದನ್ನು ಹಾಳುಗೆಡವಿ ಇಂದು ವಾತಾವರಣದಲ್ಲಿ ಏರುಪೇರು ಕಾಣುವಂತ್ತಾಗಿದೆ ಪ್ರಾಕೃತಿಕ ವಿಕೋಪಗಳು ಕಾಡುತ್ತಿದೆ,ಉಷ್ಣತೆ ದಿನದಿಂದ ದಿನಕ್ಕೆ ಏರುತ್ತಿದೆ ಹೀಗೆ ಮುಂದುವರೆದರೆ ಮುಂದಿನ ದಿನಗಳು ಕ್ಲಿಷ್ಟಕರವಾಗಲಿದೆ ಈ ದಿಸೆಯಲ್ಲಿ ಪಂಚವರ್ಣ ಸಂಸ್ಥೆ ಊರುಕೇರಿ ಸುತ್ತಿ ಪರಿಸರ ಉಳಿಸುವ ಕಾರ್ಯ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಪ್ರತಿಯೊಬ್ಬರು ಗಿಡ ನೆಟ್ಟು ಪೋಷಿದರೆ ಸಮೃದ್ಧ ವಾತಾವರಣ ಕಾಣಲು ಸಾಧ್ಯವಾಗುತ್ತದೆ.ಪರಿಸರ ಉಳಿಸುವ ಕಾರ್ಯ ನೂರು ತೆಂಗಿನ ಕಾಯಿ ಗಣಹೋಮದಷ್ಟೆ ಶ್ರೇಷ್ಠವಾದದ್ದು ಎಂದು ಪಂಚವರ್ಣ ಪ್ರತಿ ಕಾರ್ಯಕ್ರಮವನ್ನು ಪ್ರಶಂಸಿದರು.
ಇದೇ ವೇಳೆ ಸ್ಥಳೀಯರಿಗೆ ಗಿಡಗಳನ್ನು ವಿದ್ವಾನ್ ಡಾ.ವಿಜಯ್ ಮಂಜರ್ ವಿತರಿಸಿದರು. ಕಾರ್ಯಕ್ರಮದಲ್ಲಿ ಒಂದಿಷ್ಟು ಮನೆಗಳನ್ನು ಆಯ್ಕೆಮಾಡಿ ಗಿಡಗಳನ್ನು ನೆಡಲಾಯಿತು.
ಮುಖ್ಯ ಅಭ್ಯಾಗತರಾಗಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷ ಅರವಿಂದ ಶರ್ಮ,ಬ್ಯಾಂಕ್ ಉದ್ಯೋಗಿ ನವೀನ್ ಹೊಳ್ಳ, ಕಾರಂತ್, ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಾಂತ.ಎಸ್.ಭಟ್,ಸAಘದ ಸಿ.ಇ.ಓ ಶ್ಯಾಮಲ ಪೂಜಾರಿ,ಪಾಂಡೇಶ್ವರ ಗ್ರಾಮಪಂಚಾಯತ್ ಸದಸ್ಯೆ ಸುಜಾತ ಪೂಜಾರಿ,ಪಂಚರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್,ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷೆ ಜೂಡಿತ್ ಪಿಕಾರ್ಡ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.