ಕೋಟ: : ರಂಗಭೂಮಿಯ ಆಸಕ್ತಿಯನ್ನು ಮಕ್ಕಳಲ್ಲಿ ಮೂಡಿಸುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಮಕ್ಕಳ ಮೂಲಕ ರಂಗಭೂಮಿ ವಾತಾವರಣ ತೆಕ್ಕಟ್ಟೆಯಲ್ಲಿ ಸೃಷ್ಠಿಯಾಗಲಿ. ಧಮನಿ ಟ್ರಸ್ಟ್ ಒಳ್ಳೆಯ ತೀರ್ಮಾನವನ್ನು ಕೈಗೊಂಡಿದೆ. ಭವಿಷ್ಯದ ಕುಡಿಗಳಾಗಿರುವ ಮಕ್ಕಳಲ್ಲಿ ರಂಗಭೂಮಿಯ ಬೆಳಕನ್ನು ಚೆಲ್ಲುವ ಕಾಯಕ ಸುಲಭ ಸಾಧ್ಯವಲ್ಲ. ಇಂತಹ ಕಠಿಣ ನಿರ್ಧಾರವನ್ನು ಕೈಗೊಂಡ ಸಂಸ್ಥೆಗೆ ಅಭಿನಂದನೆಗಳು ಎಂದು ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಮಕ್ಕಳ ನಾಟಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಇತ್ತೀಚಿಗೆ ಧಮನಿ ಟ್ರಸ್ಟ್ ನೇತೃತ್ವದಲ್ಲಿ ‘ಮಕ್ಕಳ ನಾಟಕ ಕಾರ್ಯಾಗಾರ’ ಆಯೋಜಿಸಿಕೊಳ್ಳಲಾಗಿತ್ತು. ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ‘ಸಿನ್ಸ್ 1999 ಶ್ವೇತಯಾನ’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಉದ್ಘಾಡಿಸಿ ಬೈಕಾಡಿ ಮಾತನ್ನಾಡಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಯಕ್ಷಗುರು ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ, ಯಕ್ಷಗುರು ಲಂಬೋದರ ಹೆಗಡೆ, ರಂಗ ನಿರ್ದೇಶಕ ರಂಜಿತ್ ಶೆಟ್ಟಿ ಕುಕ್ಕುಡೆ, ಮಹಾಲಕ್ಷ್ಮಿ ಸೋಮಯಾಜಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀಷ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಾರ್ಯಾಗಾರ ನಡೆಯಿತು.