Home » ಉಚಿತ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ
 

ಉಚಿತ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ

ರೋಟರಿ ಕ್ಲಬ್

by Kundapur Xpress
Spread the love

ಕೋಟ: ಶಿಕ್ಷಣವು ಜ್ಞಾನವನ್ನು ನೀಡಿದರೆ ಪಠ್ಯೇತರ ಚಟುವಟಿಕೆಗಳು ಕೌಶಲ್ಯ ಮತ್ತು ಸಾಮರ್ಥ್ಯವನ್ನು ತುಂಬುತ್ತವೆ. ಉತ್ತಮ ಬದುಕಿಗೆ ಬೇಕಾದ ಆತ್ಮವಿಶ್ವಾಸವನ್ನು ನೀಡುತ್ತವೆ.ಆದುದರಿಂದ ಮಕ್ಕಳು ಓದಿನ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ ಶರ್ಮ ಹೇಳಿದರು.
ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದಿಂದ ನೀಡಲಾದ ಉಚಿತ ಐಡಿ ಕಾರ್ಡ್ ಮತ್ತು ಬೆಲ್ಟ್‍ಗಳನ್ನು ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಕಾರ್ಯದರ್ಶಿ ಕರುಣಾಕರ ಶೆಟ್ಟಿ , ಬಾಲಕೃಷ್ಣ ಪೂಜಾರಿ, ಗಣೇಶ್ ಜಿ, ಕೃಷ್ಣ ಆಚಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಪ್ರಭಾಕರ್ ಕಾಮತ್ ಸ್ವಾಗತಿಸಿದರು. ಅಧ್ಯಾಪಕ ಸತ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಾಪಕ ನಾರಾಯಣ ಆಚಾರ್ಯ ವಂದಿಸಿದರು.

   

Related Articles

error: Content is protected !!