ಮುಂಬೈ : ನಗರದ ಕಾಲೇಜೊಂದರ ಆವರಣದಲ್ಲಿ ಹಿಜಾಬ್, ಬುರ್ಖಾ ಮತ್ತು ನಕಾಬ್‌ಗಳನ್ನು ನಿಷೇಧಿಸುವ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಇದರೊಂದಿಗೆ ನ್ಯಾಯ ಮೂರ್ತಿಗಳಾದ ಎ. ಎಸ್. ಚಂದುರ್ಕರ್ ಮತ್ತು ರಾಜೇಶ್ ಪಾಟೀಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ಮತ್ತು ಮೂರನೇ ವರ್ಷದಲ್ಲಿ ಓದುತ್ತಿರುವ 9 ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಚೆಂಬೂರ್ ಟೊಂಬೇ ಎಜುಕೇಶನ್ ಸೊಸೈಟಿಯ ಎನ್. ಜಿ. ಆಚಾರ್ಯ ಮತ್ತು ಡಿ. ಕೆ. ಮರಾಠ ಕಾಲೇಜು ವಿದ್ಯಾರ್ಥಿಗಳು ಹಿಜಾಬ್, ನಕಾಬ್, ಬುರ್ಖಾ, ಸ್ಟೋಲ್, ಟೋಪಿ ಮತ್ತು ಬ್ಯಾಡ್ಜ್ ಗಳನ್ನು ಧರಿಸುವಂತಿಲ್ಲ ಎಂದು ಡ್ರೆಸ್ ಕೋಡ್ ವಿಧಿಸಿರುವ ನಿರ್ದೇಶನವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು