ಬ್ರಿಡ್ಜ್ಟೌನ್ : ತಾರಾ ಆಟಗಾರರಾದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ-20 ಆವೃತಿಗೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ ಬೆನ್ನಲ್ಲೆ ತಂಡದ ಆರೌಂಡರ್ ರವೀಂದ್ರ ಜಡೇಜಾ ಕೂಡ ಚುಟುಕು ಆವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ವಿಶ್ವದ ಫೀಲ್ಟರ್ಗಳಲ್ಲಿ ಒಬ್ಬರೆನಿಸಿದ್ದ ರವೀಂದ್ರ ಜಡೇಜಾ ಏಕದಿನ ಮತ್ತು ಟೆಸ್ಟ್ ಆವೃತ್ತಿಗಳಲ್ಲಿ ಮುಂದುವರೆಯಲಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೃದಯಪೂರ್ವಕ ಕೃತಜ್ಞತೆಗಳೊಂದಿಗೆ ಟಿ-20 ಆವೃತ್ತಿಗೆ ವಿದಾಯ ಹೇಳುತ್ತಿದ್ದೇನೆ.ಓಡುವ ಕುದುರೆಯಂತೆ ನಾನು ಯಾವಗಲೂ ದೇಶಕ್ಕಾಗಿ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದನ್ನೂ ನೀಡಲು ಪ್ರಯತ್ನಿನಿಸಿದ್ದೇನೆ. ಇದೀಗ ಇತರ ಆವೃತ್ತಿಗಳಲ್ಲಿ ಅದೇ ರೀತಿಯ ಪ್ರದರ್ಶನವನ್ನು ಮುಂದುವರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ಟಿ-20 ವಿಶ್ವಕಪ್ ಟೋಫಿಯನ್ನು ಗೆಲ್ಲುವ ಕನಸು ನನಸಾಗಿದೆ ಮತ್ತು ಇದು ನನ್ನ ಟಿ-20 ಅಂತರರಾಷ್ಟ್ರೀಯ ವೃತ್ತಿಜೀವನದ ಅತಿದೊಡ್ಡ ಕ್ಷಣವಾಗಿದೆ. ಈ ನೆನಪುಗಳಿಗಾಗಿ ಮತ್ತು ನಿಮ್ಮ ನಿರಂತರ ಪೋತ್ಸಾಹಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ
ಟಿ-20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಮೂರು ಮುತ್ತುಗಳು ನಿವೃತ್ತಿ ಹೊಂದಿದ್ದು ಕ್ರೀಡಾ ಪ್ರೇಮಿಗಳಿಗೆ ನಿರಾಶೆ ಉಂಟುಮಾಡಿದೆ