ಬೆಂಗಳೂರು : ಹಿಂದುಗಳ ಕುರಿತ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಅವರ ಕುಟುಂಬದ ಡಿಎನ್ಎ ಕೂಡ ಕಾರಣ ಇರಬಹುದು ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕನ್ವರ್ಷನ್ ಮಾಫಿಯದ ಕೈಗೊಂಬೆಯಾಗಿ ಸದನದಲ್ಲಿ ಹಿಂದೂ ವಿರೋಧಿಯಾಗಿ ಹೇಳಿಕೆ ಕೊಟ್ಟಿರುವ ಸಾಧ್ಯತೆ ಇದೆ ಎಂದು ಟೀಕಿಸಿದರು. ಅವರ ಮುತ್ತಾತ ಜವಾಹರ ಲಾಲ್ ನೆಹರೂ ಅವರು ‘ನನ್ನನ್ನು ಕತ್ತೆ ಎಂದು ಬೇಕಾ ದರೂ ಕರೆಯಿರಿ. ಹಿಂದು ಎಂದು ಕರೆಯಬೇಡಿ’ ಎಂದಿದ್ದರು. ಆ ಡಿಎನ್ಎ ಪ್ರಭಾವವೂ ಇರಬಹುದುಅಥವಾಕನ್ವರ್ಷನ್ ಮಾಫಿಯದಕೈಗೊಂಬೆಯಾಗಿರುವ ಕಾರಣಕ್ಕೂ ಇರಬಹುದು. ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ರಾಹುಲ್ ಗಾಂಧಿ ಹಿಂದು ದ್ವೇಷವನ್ನು ತೋರಿಸಿದ್ದಾರೆ ಎಂದು ಕಿಡಿಕಾರಿದರು.