Home » ರೋಟರಿ ಕೋಟ-ಸಾಲಿಗ್ರಾಮ ಪದಪ್ರದಾನ ಕಾರ್ಯಕ್ರಮ
 

ರೋಟರಿ ಕೋಟ-ಸಾಲಿಗ್ರಾಮ ಪದಪ್ರದಾನ ಕಾರ್ಯಕ್ರಮ

by Kundapur Xpress
Spread the love

ಕೋಟ: ಸಂಘಟನೆಗಳ ಹುಟ್ಟು ಮುಖ್ಯವಲ್ಲ, ಅವು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಮುಖ್ಯ. ರೋಟರಿಯಂಥಹ ಸಮಾಜಮುಖಿ ಚಿಂತನೆಯ ಸಂಘಟನೆಗಳಿಂದ ಸಾಮಾಜಿಕ ಪ್ರಗತಿ ಸಾಧ್ಯ ಎಂದು ಉಪನ್ಯಾಸಕ ಸಂಜೀವ ಗುಂಡ್ಮಿ ತಿಳಿಸಿದರು.
ಮಂಗಳವಾರ ಕೋಟ ಸಮುದ್ಯತಾ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ನೂತನ ಪದಾಧಿಕಾರಿಗಳ ಪದಪ್ರದಾನದಲ್ಲಿ ಮಾತನಾಡಿದರು. ರೋಟರಿ ಸಹಾಯಕ ಗವರ್ನರ್ ಮಮತಾ ಆರ್. ಶೆಟ್ಟಿ ಹದ್ದೂರು ಮಾತನಾಡಿ, ನಾವೆಲ್ಲ ಒಟ್ಟಾಗಿ-ಒಂದಾಗಿ ದುಡಿದರೆ ರೋಟರಿಯ ಧ್ಯೇಯ ಈಡೇರಲು ಸಾಧ್ಯವಿದೆ ಎಂದರು.
ಈ ಸಂದರ್ಭ ರೋಟರಿಯ ನೂತನ ಅಧ್ಯಕ್ಷರಾಗಿ, ತಾ.ಪಂ. ಮಾಜಿ ಸದಸ್ಯ, ಸಹಕಾರಿ ದುರೀಣ ಜಿ.ತಿಮ್ಮ ಪೂಜಾರಿ, ಕಾರ್ಯದರ್ಶಿಯಾಗಿ ಪುರಸಭೆ ನಿವೃತ್ತ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಕಾರ್ಕಡ ಅಧಿಕಾರ ಸ್ವೀಕರಿಸಿದರು. ಸಾಧಕರಿಗೆ ಸಮ್ಮಾನ, ಪ್ರತಿಭಾ ಪುರಸ್ಕಾರ, ಸಹಾಯಧನ ಹಂಚಿಕೆ ನೆರವೇರಿತು.ಹಿಂದಿನ ಸಾಲಿನ ಸಹಾಯಕ ಗವರ್ನರ್ ನರಸಿಂಹ ಪ್ರಭು ,ವಲಯ ಪ್ರತಿನಿಧಿ ಗಣೇಶ್ ಹೊಳ್ಳ, ಹಿಂದಿನ ಸಾಲಿನ ಅಧ್ಯಕ್ಷ ದೇವಪ್ಪ ಪಟಗಾರ್ ಉಪಸ್ಥಿತರಿದ್ದರು.
ಕ್ಲಬ್‍ನ ಸದಸ್ಯ ಶ್ರೀಕಾಂತ್ ಶೆಣೈ ಸ್ವಾಗತಿಸಿ, ರಾಜೇಶ್, ರಾಜೇಂದ್ರ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.

   

Related Articles

error: Content is protected !!