ಬೆಂಗಳೂರು : ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ಪಡೆಯಲು ಹಾಗೂ ಶಾಸಕರ ಅಹವಾಲು ಆಲಿಸುವ ಸಲುವಾಗಿ ಪ್ರತಿ ಗುರುವಾರ ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ನಮ್ಮ ಮನವಿ ಆಲಿಸಲು ಪ್ರತ್ಯೇಕ ಸಮಯ ನಿಗದಿ ಮಾಡಿಕೊಡಿ ಎಂದು ಶಾಸಕರಿಂದ ಮನವಿ ಕೇಳಿ ಬಂದಿತ್ತು ಈ ಹಿನ್ನಲೆಯಲ್ಲಿ ಸಿ ಎಂ ಭೇಟಿಗೆ ಪ್ರತಿ ಗುರುವಾರ ಸಮಯ ನಿಗದಿಯಾಗಿದೆ