ಕೋಟ : ಪ್ರತಿಯೊಬ್ಬರೂ ಜೀವನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಕೊಡುಗೆಗಳನ್ನು ಪ್ರತಿಯೊಬ್ಬರೂ ಉಪಯೋಗಿಸುವುದರಿಂದ ಸಮಾಜ ಸೇವೆ ಪ್ರತಿಯೊಬ್ಬನ ಕರ್ತವ್ಯವೂ ಆಗಿರುತ್ತದೆ. ಸಮಾಜ ಸೇವೆಯಿಂದ ಸಂತೃಪ್ತ ಮನೋಭಾವ ದೊರೆಯುವುದು. ರೋಟರಿ ಕ್ಲಬ್‍ಗಳು ಸಮಾಜ ಸೇವೆ ಮಾಡಲು ಅತ್ಯುತ್ತಮ ವೇದಿಕೆಯಾಗಿರುತ್ತದೆ ಎಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ನಿರ್ಗಮನ ಅಧ್ಯಕ್ಷ ಅರವಿಂದ ಶರ್ಮ ತಿಳಿಸಿದರು.
ಸಾಸ್ತಾನದ ಸಂಭ್ರಮ್ ಹಾಲ್‍ನಲ್ಲಿ ಆಯೋಜಿಸಿದ್ದ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮಾರಂಭದ ಪದ ಪ್ರಧಾನ ಅಧಿಕಾರಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ರೊಟೇರಿಯನ್ ಅಭಿನಂದನ ಶೆಟ್ಟಿಯವರು ನೂತನ ಅಧ್ಯಕ್ಷರಾದ ಲೀಲಾವತಿ ಗಂಗಾಧರ್ ಪೂಜಾರಿ ಅವರಿಗೆ ಕೊರಳ ಲಾಂಛನ ತೊಡಿಸುವುದರ ಮೂಲಕ ಪದ ಪ್ರಧಾನ ನೆರವೇರಿಸಿಕೊಟ್ಟರು.
ಕ್ಲಬ್‍ನ ಹಂಸ ಪತ್ರಿಕೆಯನ್ನು ರೋಟರಿ ಸಹಾಯಕ ಗವರ್ನರ್ ಆರ್.ಎಮ್.ಸಾಮಗ ಬಿಡುಗಡೆ ಗೊಳಿಸಿದರು.
ನಿರ್ಗಮನ ಕಾರ್ಯದರ್ಶಿ ಕರುಣಾಕರ ಶೆಟ್ಟಿ ಅವರು 2023 -24ರ ಸಾಲಿನ ಕ್ಲಬ್‍ನ ಸೇವಾ ಚಟುವಟಿಕೆಗಳನ್ನು ವಾಚಿಸಿದರು.
ರೋಟರಿ ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್, ವಲಯ ಸೇನಾನಿ ರಾಜಾರಾಮ್ ಐತಾಳ್ ,ದಿನೇಶ್ ನಾಯರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಅರವಿಂದ ಶರ್ಮ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಸುಲತಾ ಹೆಗ್ಡೆ ವಂದಿಸಿದರು. ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.