Home » ಸ್ವಾವಲಂಬಿ ಬದುಕಿಗೆ ಪಿ.ಎಂ ಯೋಜನೆ ಸಹಕಾರಿ
 

ಸ್ವಾವಲಂಬಿ ಬದುಕಿಗೆ ಪಿ.ಎಂ ಯೋಜನೆ ಸಹಕಾರಿ

ಸಕ್ಕರೆ ಸಾಗಾಟ ಲಾರಿ ಪಲ್ಟಿ

by Kundapur Xpress
Spread the love

ಕೋಟ: ಸ್ವಾವಲಂಬಿ ಬದುಕಿನತ್ತ ಪ್ರತಿಯೊಬ್ಬರು ಮುಂದಾಗಬೇಕು ಈ ಮೂಲಕ ತನ್ನ ಸ್ವಂತ ಕೌಶಲ್ಯಾಭಿವೃದ್ಧಿಯನ್ನು ಪ್ರಚುರಪಡಿಸಿಕೊಳ್ಳಿ ಎಂದು ಪತ್ರಕರ್ತ ರವೀಂದ್ರ ಕೋಟ ತಿಳಿಸಿದರು.

ಕೋಟದ ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿಯಲ್ಲಿ ಹಮ್ಮಿಕೊಂಡ ಭಾರತ ಸರಕಾರದ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಒಂದು ವಾರಗಳಕಾಲ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಸ್ವ ಉದ್ಯಮದ ಮೂಲಕ ಯಶಸ್ಸು ಸಾಧಿಸಲು ಸಾಧ್ಯವಿದೆ ಅದಕ್ಕೆ ಸರಕಾರದ ಯೋಜನೆಗಳು ಅದಕ್ಕೆ ಸಂಬಂಧಿಸಿದ ತರಬೇತಿಗಳು ಸಹಕಾರಿಯಾಗಲಿದೆ.ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಕರಾರುವಾಕ್ಕಾಗಿ ಅನುಷ್ಠಾನಗೊಳಿಸಬೇಕು ಎಂದರಲ್ಲದೆ ಇದೇ ವೇಳೆ ಪ್ರಸ್ತುತ ಕಾಲಘಟ್ಟದಲ್ಲಿ ಮಾಧ್ಯಮ ಹಾಗೂ ಪರಿಸರ ಕಾಳಜಿಯ ವಿಷಯಗಳನ್ನು ವಿವರವಾಗಿ ಶಿಬಿರಾರ್ಥಿಗಳಿಗೆ ನೀಡಿದರು.ಈ ಸಂದರ್ಭದಲ್ಲಿ ಪರಿಸರ ಜಾಗೃತಿಯ ಪ್ರತಿಜ್ಞಾ ವಿಧಿಯನ್ನು ಶಿಬಿರಾರ್ಥಿಗಳಿಗೆ ಭೋದಿಸಲಾಯಿತು.ಒಂದು ವಾರಗಳ ಕಾಲ ಹಮ್ಮಿಕೊಂಡ ಈ ಯೋಜನೆಯ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಜ್ಞಾನಚೇತನ ಕಂಪ್ಯೂಟರ್ ಅಕಾಡೆಮಿಯ ಮುಖ್ಯಸ್ಥ ಚೇತನ್ ಬಂಗೇರ,ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

   

Related Articles

error: Content is protected !!