ಕೋಟ: ಶ್ರೀ ಕ್ಷೇತ್ರ ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ವತಿಯಿಂದ ಎರಡು ದಶಕಗಳಿಂದ ನಿಗಮಾಗಮ ವೇದ ಪಾಠಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಐದು ವರ್ಷಗಳ ಅವಧಿಯ ಇಲ್ಲಿನ ಶಿಕ್ಷಣವನ್ನು ಪೂರೈಸಿರುವ ವಿಪ್ರರು ನಾಡಿನ ವಿವಿಧೆಡೆ ಪೌರೋಹಿತ್ಯ, ವೇದ ಶಿಕ್ಷಣವೇ ಮುಂತಾದ ಕ್ಷೇತ್ರಗಳಲ್ಲಿ ಸುಭದ್ರವಾದ ನೆಲೆಯನ್ನು ಕಂಡುಕೊಂಡಿದ್ದಾರೆ. ಜೂನ್ ತಿಂಗಳಲ್ಲಿ ಪ್ರಸಕ್ತ ಸಾಲಿನ ಪ್ರವೇಶಾತಿ ಪ್ರಕ್ರಿಯೆಯು ಆರಂಭಗೊಂಡಿದ್ದು. ಈ ಸಾಲಿನ ವೇದ ಪಾಠದ ತರಗತಿಗಳು ಜುಲೈ 23 ರರಿಂದ ಪ್ರಾರಂಭವಾಗಲಿದ್ದು ಆಸಕ್ತ ಹಿರಿಯ ವಿಪ್ರರು ತಮ್ಮ ತಮ್ಮ ಆಧಾರ ಪ್ರತಿಯೊಂದಿಗೆ ಜುಲೈ .20ರ ಒಳಗಾಗಿ ಶ್ರೀ ದೇವಳದ ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಉಪನೀತ ವಿಪ್ರ ವಟುಗಳು ಕೂಡ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿರುವುದಾಗಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.