ಕುಂದಾಪುರ : ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಎ.ಕಿರಣ್ ಕುಮಾರ್ ಕೊಡ್ಗಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯ IRB ಅಧಿಕಾರಿಗಳೊಂದಿಗೆ ಚರ್ಚಿಸಿ, ಹೇರಿಕುದ್ರು ಸರ್ವಿಸ್ ರಸ್ತೆ ಬಗ್ಗೆ ಪ್ರಸ್ತಾಪಿಸಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ. ಬಾನುಕುದ್ರು ಕೊರಗಯ್ಯ ಶೆಟ್ಟಿಯವರ ಮನೆಯಿಂದ ಬೊಬ್ಬರ್ಯ ದೇವಸ್ಥಾನದವರಗೆ ರಸ್ತೆ ಮತ್ತು ಚರಂಡಿ ಬಲಭಾಗದಲ್ಲಿ ಜ್ಯೋತಿ ಶೆಟ್ಟಿ ಮನೆಯಿಂದ ಮಟನ್ ಅಂಗಡಿ ಹಿಂಭಾಗ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಸರ್ವಿಸ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಮಳೆಗಾಲ ಮುಗಿದ ತಕ್ಷಣ ಪ್ರಾರಂಭಿಸುವುದಾಗಿ ಅಧಿಕಾರಿಗಳು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಭಾಸ್ಕರ್ ಬಿಲ್ಲವ ಬಿಜೆಪಿ ಕುಂದಾಪುರ ಮಂಡಲ ಉಪಾಧ್ಯಕ್ಷರಾದ ಸುನಿಲ್ ಶೆಟ್ಟಿ ಸ್ಥಳೀಯ ಪ್ರಮುಖರಾದ ನಟರಾಜ್ ಮಹೇಂದ್ರ ಹೆಗ್ಡೆ ಹಾಗೂ ರಾಷ್ಟ್ರೀಯ ಹೆದ್ದಾರಿ ಐ.ಆರ್ ಬಿ. ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.