Home » ಸಂಭ್ರಮದ ‘ನಮ್ಮೂರ ಕೃಷ್ಣನ ಹಬ್ಬ’ಆಚರಣೆಗೆ ಸಿದ್ಧತೆ
 

ಸಂಭ್ರಮದ ‘ನಮ್ಮೂರ ಕೃಷ್ಣನ ಹಬ್ಬ’ಆಚರಣೆಗೆ ಸಿದ್ಧತೆ

ದ್ವಿತೀಯ ಸಮಾಲೋಚನಾ ಸಭೆ

by Kundapur Xpress
Spread the love

ಉಡುಪಿ : ಪರ್ಯಾಯ ಪುತ್ತಿಗೆ ಮಠ ಆಶ್ರಯದಲ್ಲಿ ಈ ಬಾರಿಯ ಶ್ರೀಕೃಷ್ಣಾಷ್ಟಮಿ- ವಿಟ್ಲಪಿಂಡಿ ಮಹೋತ್ಸವವನ್ನು ‘ನಮ್ಮೂರ ಕೃಷ್ಣನ ಹಬ್ಬ’ವಾಗಿ ಎಲ್ಲ ಸಮುದಾಯದ ಕೃಷ್ಣಭಕ್ತರನ್ನೊಳಗೊಂಡು ವಿಭಿನ್ನವಾಗಿ ಆಚರಿಸಲು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂಕಲ್ಪಿಸಿದ್ದಾರೆ.

ಆಗಸ್ಟ್ 26ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಮಹೋತ್ಸವದ ಪೂರ್ವಸಿದ್ಧತೆಗಾಗಿ ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ

ಸೋಮವಾರ ಪರ್ಯಾಯ ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ ನೇತೃತ್ವದಲ್ಲಿ ದ್ವಿತೀಯ ಸಭೆ ನಡೆಯಿತು.
ಆಗಸ್ಟ್ 1ರಿಂದಲೇ ಕೃಷ್ಣಮಠದಲ್ಲಿ ನಮ್ಮೂರ ಕೃಷ್ಣನ ಹಬ್ಬ ಆರಂಭಗೊಳ್ಳಲಿದ್ದು, ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳು, ಉಪನ್ಯಾಸ- ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ಆಯೋಜಿಸಲಾಗುತ್ತಿದ್ದು, ಮಹೋತ್ಸವವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮಾಹಿತಿ ನೀಡಿದರು.

ರಮೇಶ ಭಟ್ ಸ್ವಾಗತಿಸಿ, ವಂದಿಸಿದರು. ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಇದ್ದರು.

   

Related Articles

error: Content is protected !!