ಮಂಗಳೂರು : ಮಂಗಳೂರು ನಗರದಲ್ಲಿ ಜನತೆಯ ಆತಂತಕ್ಕೆ ಕಾರಣವಾಗಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸಿ ಬುಧವಾರ ಸ್ಥಳ ಮಹಜರು ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ ಘಟನೆ ಬುಧವಾರ ನಡೆದಿದೆ.
ಈ ಘಟನೆ ವೇಳೆ ಎಎಸ್‌ಐ ವಿನಯ್ ಕುಮಾರ್ ಹಾಗೂ ಸಿಬ್ಬಂದಿ ಶರತ್ ಗಾಯಗೊಂಡಿದ್ದಾರೆ.. ದರೋಡೆಕೋರರಾದ ರಾಜು ಸಿಂಗ್ಟಾನಿಯಾ ಎಡ ತೊಡೆಗೆ ಹಾಗೂ ಹಾಗೂ ಇನ್ನೋರ್ವ ಆರೋಪಿ ಬಾಲಿ ಎಂಬಾತನ ಬಲ ಕಾಲಿಗೆ ಗುಂಡೇಟುತ ತಗಲಿದ್ದು, ಅವರಿಬ್ಬರನ್ನು ವೆನ್ನಾಕ್ ಆಸ್ಪತ್ರೆಗೆ ಹಾಗೂ ಗಾಯಗೊಂಡ ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಇನ್‌ಸ್ಪೆಕ್ಟರ್ ಭಾರತಿ ತಂಡಕ್ಕೆ 50,000 ರು. ನಗದು
ಘಟನೆ ನಡೆದು ಐದು ಗಂಟೆಗಳ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸುಲಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಇನ್‌ಸ್ಪೆಕ್ಟರ್ ಭಾರತಿ ನೇತೃತ್ವದ ತನಿಖಾ ತಂಡಕ್ಕೆ ಹಾಗೂ ಉಳಾಯಿಬೆಟ್ಟು ಡಕಾಯಿತಿ ಪ್ರಕರಣ ಬೇಧಿಸಿದ ತಂಡಕ್ಕೆ ತಲಾ 50,000 ರು.ಗಳ ಬಹುಮಾನವನ್ನು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಪ್ರಕಟಿಸಿದರು.