ಕಾಪು : ಕಾಪು ತಾಲೂಕಿನ ಪಾದೂರು ಮತ್ತು ಕಳತ್ತೂರು ಗ್ರಾಮದ ಇಂಡಿಯನ್ ಸ್ಟ್ರೆಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (I.S.P.R.L) 2ನೇ ಹಂತದ ಯೋಜನೆಯಿಂದ ಮನೆ ಕಳೆದುಕೊಳ್ಳುವ ಭೂಸಂತ್ರಸ್ಥರಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಯೋಜನೆಯಡಿಯಲ್ಲಿ ಒದಗಿಸಲಾಗುವ ಸೌಲಭ್ಯ ಹಾಗೂ ಭೂಸ್ವಾಧೀನವಾಗುತ್ತಿರುವ ಜಮೀನಿನ ಪರಿಹಾರ ಮೊತ್ತದ ವಿಚಾರದ ಕುರಿತು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ಕಚೇರಿಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿಗಳಾದ ವಿದ್ಯಾ ಕುಮಾರಿ, ಕೆ.ಐ.ಎ.ಡಿ.ಬಿ ಎಸ್.ಎಲ್.ಓ ರಾಜು ಕೆ, ಸಹಾಯಕ ಆಯುಕ್ತರಾದ ರಶ್ಮಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ್, ಕಾಪು ತಹಶೀಲ್ದಾರರಾದ ಪ್ರತಿಭಾ ಆರ್, I.S.P.R.L ಅಧಿಕಾರಿಗಳು ಉಪಸ್ಥಿತರಿದ್ದರು