Home » ಕೊನೆಗೂ ನಾಗೇಂದ್ರ ಬಂಧನ
 

ಕೊನೆಗೂ ನಾಗೇಂದ್ರ ಬಂಧನ

by Kundapur Xpress
Spread the love

ಬೆಂಗಳೂರು : ಸುಮಾರು 40 ಗಂಟೆಯ ಸತತ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಬಿ. ನಾಗೇಂದ್ರ, ಅವರನ್ನು ಶುಕ್ರವಾರ ಬಂಧಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಾಗೇಂದ್ರ ಅವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದ ಇಡಿ ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಿತು. ನಾಗೇಂದ್ರ ಬಂಧನ ಬೆನ್ನಲ್ಲೇ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿ ಶಾಸಕ ಬಸವನಗೌಡ ದದ್ದಲ್‌ಗೂ ನಡುಕ ಶುರುವಾಗಿದ್ದು, ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಎಸ್‌ಐಟಿ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ನನ್ನನ್ನು ಈಗಲೇ ಬಂಧಿಸಿ ಎಂದು ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆ ವೇಳೆ ಮೊರೆಯಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಗರಣಕ್ಕೆ ಸಂಬಂಧಿಸಿದಂತೆ ಜು.10ರ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಜತೆಗೆ ನಾಗೇಂದ್ರ ಹಾಗೂ ದದ್ದಲ್ ಅವರ ಆಪ್ತ ಸಹಾಯಕರನ್ನು ಮಾಜಿ ಆಪ್ತ ಸಹಾಯಕರನ್ನು ಸೇರಿ ಹಲವರ ವಿಚಾರಣೆ ನಡೆಸಿ, ನಾಗೇಂದ್ರ ಆಪ್ತ ಸಹಾಯಕ ಹರೀಶ್ ಎಂಬುವರನ್ನು ಗುರುವಾರ ವಶಕ್ಕೆ ಪಡೆದಿದ್ದರು. ಇಡಿ ವಶಕ್ಕೆ ಪಡೆದ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ನಾಗೇಂದ್ರ, ಈ ಹಗರಣದ ಬಗ್ಗೆ ತನಗೇನೂ ಮಾಹಿತಿಯಿಲ್ಲ ಎಂದರು. ಆದರೆ, ಅವರ ಆಪ್ತ ಸಹಾಯಕ ಹರೀಶ್ ಹೇಳಿಕೆ ಹಾಗೂ ಆತನಿಗೆ ನಾಗೇಂದ್ರ ಅವರು 25 ಲಕ್ಷ ರೂ. ಹಣ ನೀಡಿರುವುದು ಈಗಾಗಲೇ ದೃಢಪಟ್ಟಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಕೂಡ ತನ್ನ ಸಾವಿಗೆ ಸಚಿವರೇ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಬರೆದಿದ್ದರು. ಈ ಹಿನ್ನೆಲೆಯಲ್ಲಿ ನಾಗೇಂದ್ರ ಅವರನ್ನು ಇಡಿ ಬಂಧಿಸಿದೆ.

   

Related Articles

error: Content is protected !!